Fri. Nov 1st, 2024

ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಸಂಚು ರೂಪಿಸಿದವರಿಗೆ ನೆರವು:ಒಬ್ಬನ ಬಂಧನ

Share this with Friends

ಬೆಂಗಳೂರು,ಮಾ.29: ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಸಂಚು ರೂಪಿಸಿದವರಿಗೆ ಸಹಾಯ ಮಾಡಿದ್ದವನೊಬ್ಬನನ್ನು ಎನ್‌ಐಎ‌ ಅಧಿಕಾರಿಗಳು ಬಂಧಿಸಿದ್ದಾರೆ.

ಮಾ.1 ರಂದು ಐಟಿಪಿಎಲ್ ಬಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಉಗ್ರರ ಕೃತ್ಯ ಎಂಬುದು ಬಯಲಾಗಿತ್ತು.

ಹಲವು ದಿನಗಳ ಕಾರ್ಯಾಚರಣೆ ಬಳಿಕ ಉಗ್ರ ಗುಂಪಿನ ಸಂಚುಕೋರನನ್ನು ಎನ್‌ಐ ಎ ಅಧಿಕಾರಿಗಳು ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಜಾಮಿಲ್ ಷರೀಫ್ ಬಂಧಿತ ಆರೋಪಿ.

ಮುಜಾಮಿಲ್ ಷರೀಫ್ ಸ್ಪೋಟಕ್ಕೆ ಬೇಕಾದ ವಸ್ತುಗಳು ಹಾಗೂ ಬೇಕಾದ ಸಹಾಯವನ್ನು ದುಷ್ಕೃತ್ಯ ಎಸಗಿದವರಿಗೆ ಸರಬರಾಜು ಮಾಡಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದು,ಈತ ಒಂದೂವರೆ ವರ್ಷಗಳ‌ ಹಿಂದೆ ಬೆಂಗಳೂರಿನ ಬಸವೇಶ್ವರ ನಗರದ ಹೋಟಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ.

ಎನ್‌ಐಎ ನಡೆಸಿದ ತನಿಖೆ ವೇಳೆ ಮುಜಾಮಿಲ್‌ ಷರೀಫ್‌, ಬಾಂಬ್‌ ಸ್ಫೋಟಕ್ಕೆ ನೆರವು ನೀಡಿದ್ದವನ ಜೊತೆ ಸತತ ಸಂಪರ್ಕದಲ್ಲಿದ್ದ ಎಂಬುದು ದೃಢಪಟ್ಟಿದೆ.

ಷರೀಫ್‌ನ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಪರಿಶೀಲಿಸಿದಾಗ ರಾಮೇಶ್ವರಂ ಕೆಫೆ ಸ್ಪೋಟದ ರೂವಾರಿಗಳಿಗೆ ಈತ ಸಹಾಯ ನೀಡಿರುವುದು ದೃಢಪಟ್ಟಿದೆ.


Share this with Friends

Related Post