ಹೈದರಾಬಾದ್, ಜೂ.8: ವಿಶ್ವದ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ಸೌಲಭ್ಯವುಳ್ಳ ರಾಮೋಜಿ ಫಿಲಂ ಸಿಟಿಯ ಸಂಸ್ಥಾಪಕ ರಾಮೋಜಿ ರಾವ್ ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ.
ಅವರಿಗೆ 87 ವರ್ಷ ವಯಸ್ಸಾಗಿತ್ತು ವಯೋ ಸಹಜ ಕಾಯಿಲೆಯಿಂದ ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಕಳೆದ ಹಲವಾರು ದಿನಗಳಿಂದ ರಾಮೋಜಿ ರಾವ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು ಹಾಗಾಗಿ ಕೆಲದಿನ ಆಸ್ಪತ್ರೆಯಲ್ಲಿದ್ದು ಮನೆಗೆ ಮರಳಿದ್ದರು.
ಮತ್ತೆ ಜೂನ್ 5 ರಂದು ಪುನಃ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಶನಿವಾರ ಮುಂಜಾನೆ 4.50ರ ಸಮಯದಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ.
ರಾಮೋಜಿ ರಾವ್ ಅವರ ನಿಧನಕ್ಕೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಪ್ಪ ವ್ಯಕ್ತಪಡಿಸಿದ್ದಾರೆ.
ಭಾರತೀಯ ಮಾಧ್ಯಮದಲ್ಲಿ ರಾಮಜಿ ರಾವ್ ಅವರು ಕ್ರಾಂತಿಯನ್ನೇ ಮಾಡಿದರು, ಅವರ ಕೊಡುಗೆಗಳು ಪತ್ರಿಕೋದ್ಯಮ ಮತ್ತು ಚಲನಚಿತ್ರ ಜಗತ್ತಿನಲ್ಲಿ ಅಳಿಸಲಾಗದ ಚಾಪು ಮೂಡಿಸಿದೆ ಎಂದು ಮೋದಿ ಕೊಂಡಾಡಿದ್ದಾರೆ.
ರಮಜಿ ರಾವ್ ಅವರ ನಿಧನಕ್ಕೆ ಎಲ್ಲಾ ಭಾಷೆಗಳ ಚಲನಚಿತ್ರ ದಿಗ್ಗಜರು, ಕಲಾವಿದರು, ನಟ ನಟಿಯರು ಮಾಧ್ಯಮದವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ