Thu. Dec 26th, 2024

ಅತ್ಯಾಚಾರಕ್ಕೆ ಒಳಗಾದ ಯುವತಿ ಆತ್ಮಹತ್ಯೆ

Share this with Friends

ಹುಣಸೂರು,ಮಾ.13: ಪ್ರೇಮಿಗಳ ದಿನದಂದೇ ಪ್ರೀತಿಯ ನಾಟಕವಾಡಿದ ಕೇಡಿಯೊಬ್ಬ ಅತ್ಯಾಚರ ಎಸಗಿ ಆಕೆಯ ಆತ್ಮಹತ್ಯೆಗೆ ಕಾರಣನಾಗಿರುವ ಘಟನೆ ಹುಣಸೂರು ತಾಲೂಕಿನಲ್ಲಿ ‌ನಡೆದಿದೆ.

ಅತ್ಯಾಚಾರಕ್ಕೆ ಒಳಗಾದ ಯುವತಿ ನ್ಯಾಯ ದೊರೆಯದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಾಲೂಕಿನ ಶ್ಯಾನಭೋಗನಹಳ್ಳಿ ಗ್ರಾಮದ
ರಂಜಿತಾ(19)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಅದೇ ಗ್ರಾಮದ ವೇಣುಗೋಪಾಲ್ ಕೃಷ್ಣ(35) ಎಂಬಾತನ ಮೇಲೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು ಪೊಲೀಸರು ಆತನಿಗೆ ಹುಡುಕಾಟ ನಡೆಸಿದ್ದಾರೆ.

ಘಟನೆ ನಡೆದು ಸುಮಾರು ಒಂದು ತಿಂಗಳಾದರೂ ನ್ಯಾಯ ದೊರೆಯದಿದ್ದರಿಂದ ಬೇಸತ್ತ ಯುವತಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಆರೋಪಿಯನ್ನ ಬಂಧಿಸುವಲ್ಲಿ ವಿಫಲರಾದ ಪೊಲೀಸರ ವಿರುದ್ದ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ದಿನ ರಂಜಿತಾಳನ್ನ ವೇಣುಗೋಪಾಲ್ ತನ್ನ ಬೊಲೆರೋ ವಾಹನದಲ್ಲಿ ಕರೆದೊಯ್ದಿದ್ದಾನೆ.

ಮದುವೆ ಆಗುವುದಾಗಿ ನಂಬಿಸಿ ಬೊಲೆರೋ ವಾಹನದಲ್ಲೇ ಬಲತ್ಕಾರ ಮಾಡಿದ್ದಾನೆ.ನಂತರ ಕೇರಳಾಗೆ ಕರೆದೊಯ್ದು ಅತ್ಯಾಚಾರ ಮಾಡಿ ಮೈಸೂರಿಗೆ ಕರೆತಂದು ಕೈಗೆ ಒಂದು ಸಾವಿರ ನೀಡಿ ಮನೆಗೆ ಹೋಗುವಂತೆ ತಿಳಿಸಿದ್ದಾನೆ.

ತನ್ನನ್ನ ಮದುವೆ ಆಗುವಂತೆ ರಂಜಿತಾ ಒತ್ತಾಯಿಸಿದ್ದು ಆ ಕಿರಾತಕ ನಿರಾಕರಿಸಿದ್ದಾನೆ.
ಜತೆಗೆ ಆತ ವಿವಾಹಿತನಾಗಿದ್ದು ಎರಡು ಮಕ್ಕಳಿವೆ.

ಬಿಳಿಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.


Share this with Friends

Related Post