Mon. Dec 23rd, 2024

ದೇಶದ ಪ್ರತಿ ಹೊಸ ಮತದಾರರನ್ನು ತಲುಪಿ‌ ವಿಶ್ವಾಸ ಗಳಿಸಿ-ಮೋದಿ ಕರೆ

Share this with Friends

ನವದೆಹಲಿ,ಫೆ.18: ನಾವು ಮತ್ತು ನಮ್ಮ ಕಾರ್ಯಕರ್ತರು ದೇಶದ ಪ್ರತಿ ಹೊಸ ಮತದಾರರನ್ನು ತಲುಪಿ‌ ವಿಶ್ವಾಸ ಗಳಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಪ್ರತಿಯೊಬ್ಬ ಫಲಾನುಭವಿಯನ್ನು, ಪ್ರತಿ ಸಮುದಾಯವನ್ನು ತಲುಪಬೇಕು, ಎಲ್ಲರ ವಿಶ್ವಾಸವನ್ನು ಗೆಲ್ಲಬೇಕು ಹಾಗಾದಾಗ ಮಾತ್ರ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಹಾಗೂ ಎನ್‌ಡಿಎ 400 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲ್ಲು ಸಾಧ್ಯ ಎಂದು ಹೇಳಿದ್ದಾರೆ.

ಭಾರತ ಮಂಟಪದಲ್ಲಿ ನಡೆದ ಬಿಜೆಪಿ ಮಹಾ ಅಧಿವೇಶನ ಸಮಾರೋಪ ಸಂಪನ್ನಗೊಳಿಸಿ ಮಾತನಾಡಿದ ಅವರು, ಕಳೆದ ಎರಡು ದಿನದಲ್ಲಿ ನಡೆದ ಚರ್ಚೆ ದೇಶದ ಭವಿಷ್ಯ ಉಜ್ವಲಗೊಳಿಸಲಿದೆ ಎಂದು ತಿಳಿಸಿದರು.

ಭಾರತವನ್ನು ವಿಕಾಸ ಮಾಡುವುದು ನಮ್ಮ ಸಂಕಲ್ಪ. ಮುಂದಿನ ಐದು ವರ್ಷದಲ್ಲಿ ಭಾರತ ಮೊದಲಿಗಿಂತ ಹೆಚ್ಚು ಕೆಲಸ ಮಾಡಬೇಕು. ಭಾರತ ಅಭಿವೃದ್ಧಿಯಾಗಲು ಬಿಜೆಪಿ ಅದ್ಭುತ ಜಯದೊಂದಿಗೆ ಮರಳಬೇಕಿದೆ ಎಂದು ಹೇಳಿದರು.

ನಮ್ಮ ಮೂರನೇ ಅವಧಿಯಲ್ಲಿ 2029ರಲ್ಲಿ ಯೂಥ್ ಒಲಂಪಿಕ್ಸ್‌ಗಾಗಿ ತಯಾರಿ ಮಾಡುತ್ತಿದ್ದೇವೆ. 2036ರಲ್ಲಿ ಭಾರತ ಒಲಿಂಪಿಕ್ಸ್ ನೇತೃತ್ವ ವಹಿಸಲಿದೆ ಎಂದು ಮೋದಿ ತಿಳಿಸಿದರು.

2030ರ ವೇಳೆಗೆ ರೈಲ್ವೆಯನ್ನು ಕಾರ್ಬನ್ ಮುಕ್ತಗೊಳಿಸಲಿದ್ದೇವೆ. ಪೆಟ್ರೋಲಿಯಂ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಲಿದ್ದೇವೆ ಎಂದು ಪ್ರಧಾನಿ ಭರವಸೆ ನೀಡಿದರು.


Share this with Friends

Related Post