Mon. Dec 23rd, 2024

ಎಲ್ಲಾ ತನಿಖೆಗೂ ಸಿದ್ದ:ಸಿಎಂ

Share this with Friends

ಬೆಂಗಳೂರು: ಮುಡಾ‌ ಹಗರಣ ಸಂಬಂಧ ಯಾವುದೇ‌ ತನಿಖೆ ನಡೆಸಿದರೂ ಸಿದ್ದವಾಗುದ್ದೇನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವಂತೆ ಸೂಚಿಸಿದೆ.ನಾನು ಕೋರ್ಟ್ ಪ್ರತಿಯನ್ನು ಇನ್ನೂ ಓದಿಲ್ಲ.ಪ್ರತಿ ಸಿಕ್ಕಿದ ನಂತರ ಓದಿ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

ಆದೇಶದ ಪ್ರತಿ‌ ಸಿಕ್ಕ ಕೂಡಲೇ ಓದಿ,ನಮ್ಮ ವಕೀಲರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಈಗ ನಾನು ಕೇರಳಕ್ಕೆ ಹೋಗುತ್ತಿದ್ದೇನೆ,ರಾತ್ರಿ ವೇಳೆಗೆ ಕೋರ್ಟ್ ಪ್ರತಿ ಸಿಗಲಿದೆ,
ದೂರುದಾರರು ಮೈಸೂರಿನವರು,ಹಾಗಾಗಿ ತನಿಖೆ ಕೂಡಾ ಮೈಸೂರು ಲೋಕಾಯುಕ್ತದಲ್ಲೇ ನಡೆಯಲಿದೆ.ತನಿಖೆಗೆ ನಾನು ಸಿದ್ದವಾಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.


Share this with Friends

Related Post