Wed. Dec 25th, 2024

ಸಂಪನ್ಮೂಲ, ಪರಿಸರ ರಕ್ಷಿಸಲು ಸೇವ್ ವಾಟರ್ ಯೋಜನೆ ಪ್ರಾರಂಭಿಸಿದ ಆರ್ ಇ ಸಿ‌ ಬಿ

Share this with Friends

ಬೆಂಗಳೂರು,ಜು.18: ರೋಟರಿ ಇ-ಕ್ಲಬ್ ಆಫ್ ಬೆಂಗಳೂರು ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರವನ್ನು ರಕ್ಷಿಸಲು ಸೇವ್ ವಾಟರ್ ಯೋಜನೆಯನ್ನು ಪ್ರಾರಂಭಿಸಿದೆ.

ಇದು ಆರ್ ಇ ಸಿ‌ ಬಿ ಮತ್ತು ರೋಟರಿ ಕೋರಮಂಗಲ ಕ್ಲಬ್‌ನ ಜಂಟಿ ಯೋಜನೆಯಾಗಿದೆ.

ಮುಂದಿನ ಒಂದು ವರ್ಷದಲ್ಲಿ ಆರೋಗ್ಯ, ಸುಸ್ಥಿರತೆ, ಶಾಂತಿ ಮತ್ತು ಸಂಘರ್ಷ ಪರಿಹಾರದ ಕುರಿತು ಹಲವಾರು ಪ್ರಮುಖ ಸಮುದಾಯ ಸೇವಾ ಯೋಜನೆಗಳನ್ನು ಕೈಗೊಳ್ಳುವ ಗುರಿ ಹೊಂದಲಾಗಿದೆ.

ಡಾ.ವೈ.ಎಸ್.ಆರ್. ಮೂರ್ತಿ ಅವರು ಆರ್ ಇ ಸಿ ಬಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ‌ ಆರ್ ವಿ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ರೋಟರಿಯನ್ನರಾದ ನಿವೇದಿತಾ ಮತ್ತು ಆಶಿಸ್ ದತ್ತಾ ಅವರೊಂದುಗೆ ಯೋಜನೆಯನ್ನು ಪ್ರಕಟಿಸಿದರು.

ನೀರಿನ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇದೇ ವೇಳೆ ಹಾಲ್ಟ್ ದಿ ಡ್ರಾಪ್ ಕಿರುಚಿತ್ರವನ್ನು ಬಿಡುಗಡೆ ಮಾಡಲಾಯಿತು,

ಡಾ.ವೈ.ಎಸ್.ಆರ್. ಆರ್‌ವಿ ಶಿಕ್ಷಕರ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್ 3191 ಸತೀಶ್ ಮಾಧವನ್ ಮತ್ತು‌‌ ಮೂರ್ತಿ ಅವರು ಐವರು ಹೊಸ ಸದಸ್ಯರನ್ನು ಕ್ಲಬ್‌ಗೆ ಸೇರ್ಪಡೆಗೊಳಿಸಿದರು.

ಇದೇ ಸಂದರ್ಭದಲ್ಲಿ 2024-25ನೇ ಸಾಲಿನ ರೋಟರಿ ವೊಕೇಶನಲ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಶಿಕ್ಷಣ, ವ್ಯಾಪಾರ ಮತ್ತು ಲೋಕೋಪಕಾರಕ್ಕೆ ಕಳೆದ ನಾಲ್ಕು ದಶಕಗಳಲ್ಲಿ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ
ಡಾ.ಎ.ವಿ.ಎಸ್. ಮೂರ್ತಿ ಅವರಿಗೆ ನೀಡಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಮೂರ್ತಿ ಅವರು ಜೀವಧಾರಾ ಕಂಪ್ರೆಷನ್-ಓನ್ಲಿ ಲೈಫ್ ಸಪೋರ್ಟ್ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಮುಂದಿನ ಒಂದು ವರ್ಷದ ಯೋಜನೆಗಳನ್ನು ವಿವರಿಸಿದರು.


Share this with Friends

Related Post