Sun. Dec 22nd, 2024

NWKRTC JOB CALL : ಎನ್’ಡಬ್ಲ್ಯೂಕೆಆರ್’ಟಿಸಿಯಲ್ಲಿ ಬಸ್ ಚಾಲಕರ ಹುದ್ದೆಗಳ ನೇಮಕ, ಆಸಕ್ತರಿಂದ ಅರ್ಜಿ ಆಹ್ವಾನ

Share this with Friends

ಬೆಂಗಳೂರು, ಆ.20 : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಯಲ್ಲಿ ಬಸ್ ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎನ್’ಡಬ್ಲ್ಯೂಕೆಆರ್’ಟಿಸಿ ಸಂಸ್ಥೆಯ ಧಾರವಾಡ ವಿಭಾಗವು ಖಾಲಿ ಇರುವ ಬಸ್ ಚಾಲಕ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಆಸಕ್ತ ಚಾಲಕರು ಈ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಕೆಲಸ ಪಡೆದುಕೊಳ್ಳಬಹುದು. ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು ಆಸಕ್ತರು ಅರ್ಜಿ ಸಲ್ಲಿಸಲು ತಿಳಿಸಿದೆ.

ಧಾರವಾಡ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ NWKRTC ಸಂಸ್ಥೆಯಲ್ಲಿ ಬಸ್ ಚಾಲಕರಾಗಲು ಬಯಸುವವರು ಈ ಕೂಡಲೆ ಕೆಳಕಂಡ ದಾಖಲೆಗಳನ್ನು
https://www.supreethenterprises.in/career.html ವೆಬ್ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವಂತೆ ಗುತ್ತಿಗೆ ಪಡೆದು ಸಂಸ್ಥೆ ತಿಳಿಸಿದೆ.

ಅಗತ್ಯ ದಾಖಲಾತಿಗಳು

  1. ಆಧಾರ್ ಕಾರ್ಡ್
  2. Heavy Badge ಇರುವ ಚಾಲನಾ ಪರವಾನಗಿ ಪ್ರತಿ
  3. ಅಂಕಪಟ್ಟಿ ಪ್ರತಿ

ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

  1. ಕನಿಷ್ಠ 7ನೇ ತರಗತಿ ಪಾಸಾಗಿರಬೇಕು.
  2. Heavy Badge ಲೈಸನ್ಸ್ ಮಾಡಿಸಿ ಕನಿಷ್ಠ 2 ವರ್ಷಗಳಾಗಿರಬೇಕು.
  3. ವಯಸ್ಸಿನ ಮಿತಿ 50 ವರ್ಷ ಮೀರಿರಬಾರದು.

ಆಯ್ಕೆ ಆದವರಿಗೆ ಇಪಿಎಫ್ (PF), ಓವರ್ ಟೈಮ್ ಭತ್ಯೆ (OT), ಓಟಿ, ಇನ್’ಸೆನ್ಟಿವ್ ಸೌಲಭ್ಯ ಸೇರಿ ಆಕರ್ಷಕ 23,000 ರೂಗಳ ಸಂಬಳ ಸಿಗಲಿದೆ. (ಶರತ್ತುಗಳು ಅನ್ವಯ)

ಹೆಚ್ಚಿನ ವಿವರಗಳಿಗೆ 7022004478, 9740271909, 9945230211 ಈ ಮೊಬೈಲ್ ಸಂಖ್ಯೆಗಳಿಗೆ ಬೆಳಿಗ್ಗೆ 10ರಿಂದ ಸಂಜೆ 5ರ ಒಳಗೆ ಕರೆ ಮಾಡಬಹುದು. ಅರ್ಜಿ ಸಲ್ಲಿಸಲು 2024ರ ಆಗಸ್ಟ್ 25 ಕೊನೆಯ ದಿನಾಂಕವಾಗಿದೆ.

ಅಂಚೆ ಮುಖಾಂತರ ಅರ್ಜಿ ಸಲ್ಲಿಸುವವರು #201, ಬಸವ ನಿಲಯ, 2ನೇ ಅಡ್ಡರಸ್ತೆ, ಮುನೇಶ್ವರ ಬ್ಲಾಕ್, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು – 560086 ಈ ವಿಳಾಸಕ್ಕೆ ಕಳುಹಿಸಲು ತಿಳಿಸಿದೆ.


Share this with Friends

Related Post