Sat. Apr 19th, 2025

ಮೈಸೂರು ಜಿಲ್ಲೆಗೆ ಸ್ವೀಪ್ ಐಕಾನ್ ಗಳ ನೇಮಕ

Share this with Friends

ಮೈಸೂರು, ಮಾ. 24: ಮತದಾನದ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಐಕಾನ್ ಗಳನ್ನು
ನೇಮಿಸಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ, ಮತದಾರರ ನೋಂದಣಿ ಮತ್ತು ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಇಬ್ಬರು ಐಕಾನ್ ಗಳನ್ನು ನೇಮಕ ಮಾಡಲಾಗಿದೆ.

ಮೈಸೂರು ಜಿಲ್ಲೆಗೆ ಮಾಜಿ ಭಾರತೀಯ ಕ್ರಿಕೇಟ್ ಆಟಗಾರರಾದ ಜಾವಗಲ್ ಶ್ರೀನಾಥ್ ಹಾಗೂ ಪ್ಯಾರಾ ಅಥ್ಲೆಟಿಕ್ಸ್ ಆಟಗಾರರಾದ ಎಂ. ಮಹೇಂದ್ರ ಅವರನ್ನು ಜಿಲ್ಲಾ ಸ್ವೀಪ್ ಐಕಾನ್ ಗಳಾಗಿ ಅನುಮೋದಿಸಲಾಗಿದೆ ಎಂದು ಡಿಪಿಎಆರ್(ಚುನಾವಣೆ) ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಎಂ. ಕೂರ್ಮಾ ರಾವ್ ತಿಳಿಸಿದ್ದಾರೆ.


Share this with Friends

Related Post