Fri. Nov 1st, 2024

ಕೈಕೊಟ್ಟ ಶೀತಲ ಯಂತ್ರ:ಶವಾಗಾರದಲ್ಲಿ ಮೃತ ದೇಹಗಳು ಕೊಳೆತು ದುರ್ವಾಸನೆ

Share this with Friends

ಮೈಸೂರು,ಮೇ.9: ಮೈಸೂರಿನ ಶವಾಗಾರದಲ್ಲಿ ಶೀತಲ ಯಂತ್ರಗಳು ಕೆಟ್ಟು ಮೃತದೇಹಗಳು ಕೊಳೆಯುತ್ತಿವೆ, ಆದರೆ ಕೇಳುವವರೇ ಇಲ್ಲದಂತಾಗಿದೆ. ಈ ಶವಗಾರಕ್ಕೆ ಬೇಕು ಮೇಜರ್ ಸರ್ಜರಿಅ

ಮೈಸೂರು ಮೆಡಿಕಲ್ ಕಾಲೇಜು ಆವರಣದಲ್ಲಿ ಈ
ಶವಾಗಾರವಿದ್ದು,ಮೈಸೂರು,ಮಂಡ್ಯ,ಚಾಮರಾಜನಗರ,ಮಡಿಕೇರಿ ಸೇರಿದಂತೆ ಹಲವು ಜಿಲ್ಲೆಗಳಿಂದ ಶವಪರೀಕ್ಷೆಗಾಗಿ ಶವಾಗಾರಕ್ಕೆ ಮೃತದೇಹಗಳನ್ನ ತರಲಾಗುತ್ತದೆ.

ಜೊತೆಗೆ ಅಪರಿಚಿತ ಶವಗಳನ್ನೂ ಸಹ ಇಲ್ಲಿ ಇರಿಸಲಾಗುತ್ತದೆ.ಕೆಲವೊಮ್ಮೆ ವಾರಸುದಾರರು ಇಲ್ಲದ ಕಾರಣ ಶವಪರೀಕ್ಷೆ ವಿಳಂಬವಾಗುತ್ತದೆ.ಇಂತಹ ಸಂಧರ್ಭದಲ್ಲಿ ಅನಿವಾರ್ಯವಾಗಿ ಮೃತದೇಹಗಳನ್ನ ಸಂರಕ್ಷಿಸಬೇಕಾಗುತ್ತದೆ.

ಇದಕ್ಕಾಗಿ ಮೂರು ಶೀತಲ ಯಂತ್ರಗಳನ್ನ ಇಲ್ಲಿ ಅಳವಡಿಸಲಾಗಿದೆ.ಮೂರು ಶೀತಲ ಯಂತ್ರಗಳ ಪೈಕಿ ಎರಡು ಯಂತ್ರಗಳು ಕೆಟ್ಟು ತಿಂಗಳುಗಳೇ ಉರುಳಿದೆ.

ಪುಣ್ಯಕ್ಕೆ ಕೇವಲ ಒಂದು ಯಂತ್ರ ಮಾತ್ರ ಕೆಲಸ ಮಾಡುತ್ತಿದೆ.ಒಂದು ಯಂತ್ರದಲ್ಲಿ 6 ಮೃತದೇಹಗಳನ್ನ ಇರಿಸಬಹುದಾಗಿದೆ.ಆದರೆ ಮೃತದೇಹಗಳ ಸಂಖ್ಯೆ ಹೆಚ್ಚಾದಾಗ ತೊಂದರೆಯಾಗುತ್ತದೆ.

ಶೀತಲಯಂತ್ರಗಳನ್ನ ದುರಸ್ಥುಗೊಳಿಸುವಂತೆ ಶವಾಗಾರದ ಸಿಬ್ಬಂದಿ ಮುಖ್ಯಸ್ಥರಿಗೆ ಪತ್ರ ಬರೆದಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಲ ರೋಗಿಯ ಕಡೆಯವರು ದೂರಿದ್ದಾರೆ.

ಶವಪರೀಕ್ಷೆ ನಂತರ ಮೃತದೇಹಗಳನ್ನ ಕೊಂಡೊಯ್ಯಲು ಬರುವ ಸಂಬಂಧಿಕರು ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಜನರ ಬಯ್ಗುಳಗಳ ಜತೆಗೆ ಶವಾಗಾರದ ಸಿಬ್ಬಂದಿ ದುರ್ವಾಸನೆಯನ್ನೂ ಸಹಿಸಿಕೊಂಡು ಕರ್ತವ್ಯ ನಿರ್ವಹಿಸಬೇಕಾಗಿದೆ.

ಮೃತ ದೇಹ ಕೊಳೆತರೆ ರೋಗರುಜಿನಗಳು ಹರಡುವ ಸಾಧ್ಯತೆ ಇದೆ,ಹಾಗಾಗಿ ಈ ಶವಾಗಾರಕ್ಕೇ ಬೇಕಾಗಿದೆ ಮೇಜರ್ ಸರ್ಜರಿ.

ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಶವಾಗಾರದ ಶೀತಲ ಯಂತ್ರಗಳನ್ನು ದುರಸ್ತಿ ಪಡಿಸಬೇಕೆಂದು ಜನತೆ ಆಗ್ರಹಿಸಿದ್ದಾರೆ

ಕೂಡಲೇ ಡೀನ್ ದಾಕ್ಷಾಯಿಣಿ ಮತ್ತು ಇತರೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.


Share this with Friends

Related Post