Mon. Dec 23rd, 2024

ಪ್ರತಾಪ್ ಸಿಂಹ‌ ವಿರುದ್ಧ ರೇಖಾ‌ ವ್ಯಂಗ್ಯ

Share this with Friends

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಬಗೆಗೆ ಇಲ್ಲಸಲ್ಲದ ಮಾತನಾಡುವ ಮಾಜಿ ಸಂಸದ ಪ್ರತಾಪ ಸಿಂಹ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ರೇಖಾ ಶ್ರೀನಿವಾಸ್ ಅಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಮೂಲೆಗುಂಪಾ ಗಿರುವ ಪ್ರತಾಪ ಸಿಂಹ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ,
ಹಾಗಾಗಿ ತಲೆ ಬುಡವಿಲ್ಲದ ಹೇಳಿಕೆಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಕನ್ನಡ ನಾಡಿನ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಬುದ್ಧ, ಬಸವ, ಕನಕ ಅಂಬೇಡ್ಕರರ ಸಿದ್ಧಾಂತ ಗಳೊಂದಿಗೆ ಬಹುಕೋಟಿ ಜನರ ಆಶಯದೊಂದಿಗೆ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಸರ್ವರಿಗೂ ಸಮಬಾಳು ಸರ್ವರಿಗೊ ಸಮಪಾಲು ಎನ್ನುವ ಸಿದ್ಧಾಂತವನ್ನು ಇಟ್ಟುಕೊಂಡು ಸಿದ್ದರಾಮಯ್ಯ ಅವರು ಶುದ್ಧಹಸ್ತದೊಂದಿಗೆ ಆಡಳಿತ ಚುಕ್ಕಾಣಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕರೋನಾ ಸಂದರ್ಭದಲ್ಲಿ ಎಷ್ಟೋ ಅನಾಥ ಹಿಂದೂಗಳ ಶವ ಸಂಸ್ಕಾರವನ್ನು ಎಷ್ಟೋ ಮುಸ್ಲಿಂ ಜನರು ನೆರವೇರಿಸಿದ್ದಾಗ ಪ್ರತಾಪ ಸಿಂಹ ಅವರು ಎಲ್ಲಿ ಹೋಗಿದ್ದರು. ರಾಜ್ಯದಲ್ಲಿ ಅಂದು ಬಿಜೆಪಿ ಸರಕಾರ ಕರೋನಾ ಹೆಸರಿನಲ್ಲಿ ಲೂಟಿ ಮಾಡಿದಾಗ ಅವರ ಕಾಳಜಿ ಎಲ್ಲಿ ಹೋಗಿತ್ತು ಎಂದು ರೇಖಾ ಶ್ರೀ ನಿವಾಸ್ ಪ್ರಶ್ನಿಸಿದ್ದಾರೆ.


Share this with Friends

Related Post