Mon. Dec 23rd, 2024

ನೈಋತ್ಯ ರೈಲ್ವೆಯ ಮೈಸೂರು ವಿಭಾಗದ‌ಗಮನಾರ್ಹ ಸಾಧನೆ

Share this with Friends

ಮೈಸೂರು, ಏ.2: ನೈಋತ್ಯ ರೈಲ್ವೆಯ ಮೈಸೂರು ವಿಭಾಗವು
ತನ್ನ ಇತಿಹಾಸದಲ್ಲಿಯೇ ಗಮನಾರ್ಹವಾದ ಮೈಲಿಗಲ್ಲುಗಳನ್ನು ಸಾಧಿಸಿದೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡದ ಶ್ರಮದ ಫಲವಾಗಿ ಸರಕು ಸಾಗಾಣೆ ಮತ್ತು ಪ್ರಯಾಣಿಕರ ಗಳಿಕೆಯಲ್ಲಿ ದಾಖಲೆಗಳನ್ನು ಮುರಿಯುವ ಮೂಲಕ ವಿಭಾಗವು ಅಭೂತಪೂರ್ವ ಎತ್ತರವನ್ನು ತಲುಪಿದೆ

2023-24ರ ಹಣಕಾಸು ವರ್ಷದಲ್ಲಿ, ಮೈಸೂರು ವಿಭಾಗವು 11.648 ದಶಲಕ್ಷ ಟನ್‌ಗಳಷ್ಟು ಅತ್ಯಧಿಕ ಲೋಡಿಂಗ್ ಮಾಡಿ ಸಾಧನೆ ಮಾಡಿದೆ. ಇದು ಹಿಂದಿನ ವರ್ಷದ ಅತ್ಯಧಿಕ ದಾಖಲೆಯನ್ನು ಮೀರಿದೆ.

ಮಾರ್ಚ್ 31ರಂದು ವಿಭಾಗವು 928 ವ್ಯಾಗನ್‌ಗಳನ್ನು ಲೋಡ್ ಮಾಡಿದ್ದು ಆಗಸ್ಟ್ 2023 ರಲ್ಲಿ ಸ್ಥಾಪಿಸಲಾದ ಹಿಂದಿನ ದಾಖಲೆಯನ್ನು ಮೀರಿಸಿ ಒಂದೇ ದಿನದಲ್ಲಿ ಲೋಡ್ ಮಾಡಿದ ಅತ್ಯಧಿಕ ವ್ಯಾಗನ್‌ಗಳಿಗಾಗಿ ಹೊಸ ದಾಖಲೆಯನ್ನು ಮಾಡಿದೆ.

ಮಾರ್ಚ್ 2024 ರಲ್ಲಿ, ವಿಭಾಗವು 1.145 ದಶಲಕ್ಷ ಟನ್‌ಗಳನ್ನು ಲೋಡ್ ಮಾಡಿ, ಡಿಸೆಂಬರ್ 2023 ರಲ್ಲಿ ಒಂದೇ ಮಾಸದಲ್ಲಿ ಮಾಡಿದ್ದ 1.125 ದಶಲಕ್ಷ ಟನ್‌ಗಳ ಹಿಂದಿನ ಅತ್ಯಧಿಕ ದಾಖಲೆಯನ್ನು ಮೀರಿಸಿದೆ.

ವಿಭಾಗವು 9.325 ದಶಲಕ್ಷ ಟನ್‌ಗಳಷ್ಟು ಕಬ್ಬಿಣದ ಅದಿರನ್ನು ಲೋಡ್ ಮಾಡಿ, ಹಿಂದಿನ ವರ್ಷದ ಅತ್ಯಧಿಕ ದಾಖಲೆಯಾದ 6.995 ದಶಲಕ್ಷ ಟನ್‌ಗಳನ್ನು ಮೀರಿಸಿದೆ.

ವಿಭಾಗವು ಒಂದು ತಿಂಗಳಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರು ಲೋಡ್ ಮಾಡಿದ್ದು, ಪ್ರಸಕ್ತ ತಿಂಗಳಲ್ಲಿ 0.939 ಮೆಟ್ರಿಕ್ ಟನ್ ಲೋಡ್ ಮಾಡಿ ಹಿಂದಿನ ದಾಖಲೆಯನ್ನು ಮುರಿದಿದೆ.

2023-24 ರ ಆರ್ಥಿಕ ವರ್ಷದ ಕೊನೆಯರೆಗೆ ವಿಭಾಗವು 26 ರೇಕ್‌ಗಳ ಆಟೋಮೊಬೈಲ್‌ಗಳನ್ನು (ವಾಹನಗಳನ್ನು) ಲೋಡ್ ಮಾಡಿದೆ.

ವಿಭಾಗವು ಇದುವರೆಗಿನ ಅತ್ಯಧಿಕ ಸರಕು ಸಾಗಾಣೆ ವಿಭಾಗದಲ್ಲಿ ಒಟ್ಟು 993.51 ಕೋಟಿಗಳನ್ನು ಗಳಿಸಿದೆ.

2023-24 ರ ಅವಧಿಯಲ್ಲಿ 413.73 ಕೋಟಿಗಳನ್ನು ಗಳಿಸಿದ್ದು, ವಿಭಾಗವು ಹಿಂದಿನ ವರ್ಷದ ಗಳಿಕೆಯನ್ನು ಶೇ 9.3 ರಷ್ಟು ಮೀರಿ ಸಾಧನೆ ಮೆರೆದಿದೆ ಇದು ಪ್ರಯಾಣಿಕರಿಗೆ ಹೆಚ್ಚಿನ ಸೇವೆ ಒದಗಿಸುವ ಅದರ ಬದ್ಧತೆಯನ್ನು ತೋರಿಸುತ್ತದೆ ಎಂದು ಶಿಲ್ಪಿ ಅಗರ್ ವಾಲ್ ತಿಳಿಸಿದ್ದಾರೆ.

ಅದೇ ರೀತಿ ಪಾರ್ಸೆಲ್ ವಿಭಾಗವು 10.65 ಕೋಟಿ, ಟಿಕೆಟ್ ತಪಾಸಣೆಯ ಗಳಿಕೆಯು 8.06 ಕೋಟಿ ಮೀರಿದೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ರವರು ಈ ಶ್ಲಾಘನೀಯ ಮೈಲಿಗಲ್ಲುಗಳನ್ನು ಸಾಧಿಸುವಲ್ಲಿ ಸಹಕಾರಿಯಾಗಿರುವ ಎಲ್ಲಾ ಅಧಿಕಾರಿಗಳು, ಮೇಲ್ವಿಚಾರಕರು, ಸಿಬ್ಬಂದಿ ವರ್ಗದವರ ಸಮರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮಗಳಿಗೆ ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Share this with Friends

Related Post