Mon. Dec 23rd, 2024

ಕೆಪಿಸಿಸಿ ಕಚೇರಿಯಲ್ಲಿಬಾಬು ಜಗಜೀವನ ರಾಮ್ ಸ್ಮರಣೆ

Share this with Friends

ಬೆಂಗಳೂರು, ಏ.5: ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಅವರ ಜಯಂತಿ ಯನ್ನು ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಗೃಹಸಚಿವ ಡಾ.ಜಿ. ಪರಮೇಶ್ವರ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಬಾಬು ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಸ್ಮರಣೆ ಮಾಡಿದರು.

ಈ ವೇಳೆ ಮಾತನಾಡಿದ ಡಿ. ಕೆ.ಶಿವಕುಮಾರ್ ಅವರು ಬಾಬು ಜಗಜೀವನ ರಾಮ್ ಅವರು ಉಪ ಪ್ರಧಾನಿಯಾಗಿ ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ದೇಶದ ಪ್ರಗತಿಯಲ್ಲಿ ನಮ್ಮ ಪ್ರಗತಿ ಇದೆ ಅದರ ಉದ್ದಾರದಲ್ಲೇ ನಮ್ಮ ಉದ್ದಾರವಿದೆ ಎಂದು ಬಾಬು ಜಗಜೀವನ ರಾಮ್ ನಂಬಿದ್ದರು ಅದರಂತೆ ನಡೆದರು.

ದೇಶದಲ್ಲಿ ಹಸಿರು ಕ್ರಾಂತಿ ಉಂಟು ಮಾಡಿದರು ಇಂತಹ ಮಹಾ ನಾಯಕರು ನಮಗೆಲ್ಲಾ ಸ್ಪೂರ್ತಿ ಎಂದು ಹೇಳಿದರು.


Share this with Friends

Related Post