Thu. Dec 26th, 2024

ಸರ್ಕಾರದ ವಿರುದ್ಧ ರೇಣುಕರಾಜ್ ಆಕ್ರೋಶ

Share this with Friends

ಮೈಸೂರು,ಮೇ.20: ಪ್ರೀತಿಯ ಹೆಸರಲ್ಲಿ ಅಮಾಯಕ ವಿದ್ಯಾರ್ಥಿಗಳ ಕೊಲೆ ನಡೆಯುತ್ತಿದ್ದು,ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು,ಜನ ಭಯದ ವಾತಾವರಣದಲ್ಲಿದ್ದಾರೆ ಎಂದು ದೂರಿದ್ದಾರೆ.

ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಮರೆಯುವ ಮುಂಚೆ ಮತ್ತೊಂದು ಭೀಕರ ಕೊಲೆ ನಡೆದಿದ್ದರಿಂದ ಹುಬ್ಬಳ್ಳಿ ಜನರು ಆತಂಕಕ್ಕೊಳಗಾಗಿದ್ದಾರೆ ಎಂದು ಹೇಳಿದ್ದಾರೆ ‌

ಅಲ್ಲದೇ, ಬೆಳಗಾವಿಯಲ್ಲಿ ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಬೈಕ್ ನಲ್ಲಿ ಹೊರಟ್ಟಿದ್ದ ಇಬ್ರಾಹಿಂ ಗೌಸ್ ನನ್ನು ಹುಡುಗಿಯ ಸಹೋದರ ಮುಜಾಮಿಲ್ ಸತ್ತಿಗೇರಿ ಎಂಬಾತ ಇರಿದು ಕೊಂದಿದ್ದಾನೆ. ಒಟ್ಟಾರೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಕಾನೂನಿನ ಭಯ ಇಲ್ಲದಂತಾಗಿದೆ ಎಂದು ರೇಣುಕ ಟೀಕಿ ಸಿದ್ದಾರೆ.

ಇಂತಹ ಪ್ರಕರಣಗಳಲ್ಲಿ ತಪ್ಪಿಸ್ತಸ್ಥರ ವಿರುದ್ಧ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೇಣುಕಾ ರಾಜ್ ಒತ್ತಾಯಿಸಿದ್ದಾರೆ.


Share this with Friends

Related Post