ಮೈಸೂರು, ಜೂ.16: ಮೈಸೂರು ಚಿನ್ನ ಬೆಳ್ಳಿ ವರ್ತಕರು ಇತ್ತೀಚಿಗೆ ಕೊಲೆಯಾದ ಚಿತ್ರದುರ್ಗದ ರೇಣುಕಾ ಸ್ವಾಮಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ.
ಚಿತ್ರದುರ್ಗದಲ್ಲಿರುವ ರೇಣುಕಾಸ್ವಾಮಿ
ಅವರ ಮನೆಗೆ ಚಿನ್ನ ಬೆಳ್ಳಿ ವರ್ತಕರು
ಬೇಟಿ ನೀಡಿ ಅವರ ತಂದೆ ತಾಯಿ ಮೃತರ ಪತ್ನಿ ಸಹನಾ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.
ಈ ಸಂದರ್ಭದಲ್ಲಿ 60000 ರೂ ಅರ್ಥಿಕ ನೆರವನ್ನು ನೀಡಲಾಯಿತು.
ಜ್ಯುವೆಲ್ಲರಿ ಉದ್ಯಮಿಗಳಾದ ರವಿಪ್ರಕಾಶ್, ಲಯನ್ ಸುರೇಶ್ ಗೋಲ್ಡ್, ರಾಘವೇಂದ್ರ ಸೇಟ್,ಗುರು ಡೈಮಂಡ್ ಹಾಗೂ ಬಿಜೆಪಿ ಮುಖಂಡರಾದ ಗೆಜ್ಜಗಳ್ಳಿ ಮಹೇಶ್ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.