Wed. Dec 25th, 2024

ಮೇ 13ರ ತನಕ ರೇವಣ್ಣ ಜೈಲುಪಾಲು

Share this with Friends

ಬೆಂಗಳೂರು,ಮೇ.9: ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ನಾಯಾಂಗ ಬಂಧನದಲ್ಲಿರುವ ಹೆಚ್‌ಡಿ ರೇವಣ್ಣ ಸೋಮವಾರದ ತನಕ ಜೈಲಿನಲ್ಲೇ ಇರಬೇಕಿದೆ

ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.

ವಿಶೇಷ ತನಿಖಾ ತಂಡ ಮತ್ತು ರೇವಣ್ಣ ಕಡೆಯ ವಾದವನ್ನು ಆಲಿಸಿದ ಕೋರ್ಟ್‌ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಹಾಗಾಗಿ ಮೇ 13ರ ವರೆಗೂ ಪರಪ್ಪನ ಅಗ್ರಹಾರದಲ್ಲೇ ರೇವಣ್ಣ ಇರಬೇಕಿದೆ.

ಗುರುವಾರ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯ ರೇವಣ್ಣಗೆ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು.


Share this with Friends

Related Post