Mon. Dec 23rd, 2024

ಕಾಡಾನೆ‌ ದಾಳಿಯಿಂದ ಗಂಭೀರ ಗಾಯಗೊಂಡ ರೈಟರ್

Share this with Friends

ಹಾಸನ,ಜು.5: ಕಾಫಿ ತೋಟದ ರೈಟರ್ ಒಬ್ಬರನ್ನು ಕಾಡಾನೆ ಸೊಂಡಿಲಿನಿಂದ ಹಿಡಿದು ಬಿಸಾಡಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ನಡೆದಿದೆ.

ಅರೇಹಳ್ಳಿ ಹೋಬಳಿ, ವಾಟೆಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು,ಐಬಿಸಿ ಎಸ್ಟೇಟ್‌ನ ರೈಟರ್ ಲಕ್ಷ್ಮಣ (46) ಗಂಭೀರವಾಗಿ ಗಾಯಗೊಂಡಿದ್ದಾರೆ,ಅವರನ್ನು ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಫಿ ತೋಟದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದಾಗ ಏಕಾಏಕಿ ದಾಳಿ ಮಾಡಿದ ಒಂಟಿಸಲಗ ಸೊಂಡಿಲಿನಿಂದ ಎತ್ತಿ ಲಕ್ಷ್ಮಣ ಅವರನ್ನು ಬೀಸಾಡಿದೆ.ಸಧ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಕಲೇಶಪುರ ಆಲೂರು ಬೇಲೂರು ತಾಲೂಕಿನಲ್ಲಿ ಪದೇಪದೇ ಕಾಡಾನೆ ದಾಳಿ ನಡೆಯುತ್ತಿದ್ದು ಜೀವ ಹಾನಿ ಹಾಗೂ ಬೆಳೆ ಹಾನಿ ಸಂಭವಿಸುತ್ತಲೇ ಇದೆ, ಆದ್ದರಿಂದ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಂಡು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರೈತರು ಹಾಗೂ ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ.


Share this with Friends

Related Post