ಮೈಸೂರು,ಜೂ.14: ರೇಣುಕಾಸ್ವಾಮಿ ಕೊಲೆ ಸಂಬಂಧ ಬಂಧಿತರಾಗಿರುವ ಚಿತ್ರ ನಟ ದರ್ಶನ್ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಜಿಕ ಹೋರಾಟಗಾರಾದ ಸಚಿನ್ ನಾಯಕ್ ಒತ್ತಾಯಿಸಿದ್ದಾರೆ.
ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗ ಬೇಕು, ದರ್ಶನ್ ತನ್ನ ಅಭಿಮಾನಿಗಳ ಮುಖಾಂತರ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಚಿತ್ರ ಹಿಂಸೆ ನೀಡಿ ಹೊಡೆದು ಸಾಯಿಸಿರುವುದು ರಾಕ್ಷಸ ಪ್ರವೃತ್ತಿ ಎಂದು ಅವರು ಟೀಕಿಸಿದ್ದಾರೆ.
ಚಲನಚಿತ್ರದಲ್ಲಿ ನೀತಿ ಪಾತ್ರಗಳನ್ನು ನಿರ್ವಹಿಸಿ ಸಮಾಜಕ್ಕೆ ಮಾರ್ಗ ದರ್ಶನ ನೀಡುವ ನಟರು ಎಸಗಿರುವ ಇಂತಹ ಹೇಯ ಕೃತ್ಯವನ್ನು ಸಮಾಜ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಚಿತ್ರಹಿಂಸೆ ನೀಡಿ ಕೊಲೆಗೆ ಸಹಕರಿಸಿದ ಎಲ್ಲರಿಗೂ ಘೋರಶಿಕ್ಷೆ ವಿಧಿಸುವಂತೆ ಸರ್ಕಾರವನ್ನು ಸಚಿನ್ ನಾಯಕ್ ಒತ್ತಾಯಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಇತೀಚೆಗೆ ನಡೆದ ಇನ್ಸ್‌ಪೆಕ್ಟರ್ ಗಿರೀಶ್ ನಾಯಕ ಅವರ ವರ್ಗಾವಣೆಯಲ್ಲಿ ಸರ್ಕಾರದ ನಿಲುವು ಸರಿಯಿಲ್ಲ.
ಪೊಲೀಸ್ ಇಲಾಖೆ ಸಾವತಂತ್ರವಾಗಿ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ,ಆಗಲೇಬೇಕು ಎಂದು ಸಚಿನ್ ನಾಯಕ್ ಹೇಳಿದ್ದಾರೆ.