Fri. Jan 10th, 2025

ಮಹಿಳಾ ಕ್ರಿಕೆಟ್ ಆಧರಿತ ಸಿನಿಮಾ ಸಹಾರಾ ಜೂನ್ 7 ರಂದು ತೆರೆಗೆ

Share this with Friends

ಮೈಸೂರು,ಜೂ.5: ಮಹಿಳಾ ಕ್ರಿಕೆಟ್ ಆಧರಿತ ಸಹಾರಾ ಸಿನಿಮಾ ಇದೇ ಜೂ.7 ರಂದು ರಾಜ್ಯದಾದ್ಯಂತ ತೆರೆಕಾಣಲಿದೆ.

ಜನತೆ ಚಿತ್ರಮಂದಿರಗಳಿಗೆ ಬಂದು ವೀಕ್ಷಿಸುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ಸಹಾರ ಚಿತ್ರದ ನಾಯಕಿ ನಟಿ ಸಾರಿಕಾ ರಾವ್ ಸುದ್ದಿ ಗೋಷ್ಠಿಯಲ್ಲಿ ಮನವಿ ಮಾಡಿದರು.

ಪುರುಷರ ಕ್ರಿಕೆಟ್‌ಗೆ ಹೆಚ್ಚು ಪ್ರಾಧಾನ್ಯತೆ ನೀಡಿ, ಮಹಿಳಾ ಕ್ರಿಕೆಟ್ ಕಡೆಗಣಿಸಲಾಗಿದೆ, ಹಾಗಾಗಿ ಮಂಡ್ಯ ಮೂಲಕ ಗ್ರಾಮೀಣ ಪ್ರದೇಶದ ಯುವತಿಯೊಬ್ಬರು ಕ್ರಿಕೆಟ್‌ನಲ್ಲಿನ ಸಮಸ್ಯೆ ಎದುರಿಸಿ ಸಾಧನೆ ಮಾಡುವ ಕಥೆ ಯನ್ನು ಈ ಚಿತ್ರ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತ ತಂಡದ ಮಾಜಿ ಆಟಗಾರ ಡೇವಿಡ್ ಜಾನ್ಸ್ ಸುನಿಲ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ, ಮಂಜೇಶ್ ಭಗವತ್
ನಿರ್ಮಾಣದ ಜೊತೆಗೆ ನಿರ್ದೇಶನ ಮಾಡಿದ್ದಾರೆ ಎಂದು ಸಾರಿಕಾ ಹೇಳಿದರು.

ನಂಜನಗೂಡಿನ ಕಳಲೆ ಗ್ರಾಮ ಮತ್ತು ನಗರದ ಸುತ್ತಮುತ್ತ ಚಿತ್ರೀಕಣ ಮಾಡಲಾಗಿದೆ.ಎಲ್ಲರೂ ‌ಚಿತ್ರಮಂದಿರಕ್ಕೇ‌ ಬಂದು ಸಹಾರ ಚಿತ್ರ ವೀಕ್ಷಿಸಬೇಕೆಂದು
ನಟಿ ಮತ್ತೊಮ್ಮೆ ಕೋರಿದರು.

ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರಾದ ಮಂಜೇಶ್ ಭಗವತ್, ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟಿನ ಅಧ್ಯಕ್ಷ ಬೀಡನಹಳ್ಳಿ ಸತೀಶ್‌ ಗೌಡ, ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು, ಲಯನ್ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post