Tue. Dec 24th, 2024

ಭಗವಂತನ ಆರಾಧನೆಯಿಂದ ಸನ್ಮಾರ್ಗ: ಅಪೂರ್ವ ಸುರೇಶ್

Share this with Friends

ಮೈಸೂರು,ಮೇ.21: ಮನುಷ್ಯನ ಅಂತರಂಗದಲ್ಲಿ ಸದಾ ಭಗವಂತನ ಆರಾಧನೆ ಇದ್ದರೆ ಸನ್ಮಾರ್ಗ ಲಭಿಸುತ್ತದೆ ಎಂದು ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ಹೇಳಿದರು

ಪೂರ್ಣಾಯುಷ್ಯ ಲಭಿಸುತ್ತದೆ ಎಂದು ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ಹೇಳಿದರು

ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಸ್ನೇಹ ಬಳಗದ ಕಛೇರಿಯಲ್ಲಿ ನರಸಿಂಹ ಜಯಂತಿ ಅಂಗವಾಗಿ ಶ್ರೀ ನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಆನಂತರ ಭಕ್ತರಿಗೆ ಪ್ರಸಾದ ವಿತರಿಸಿ ಅವರು ಮಾತನಾಡಿದರು.

ಅಂತರಂಗದಲ್ಲಿ ಭಗವಂತನ ಸ್ಮರಣೆ ಇರಬೇಕು,ಆಗ ಸನ್ಮಾರ್ಗ, ಶಾಂತಿಯುತ ಮನಸ್ಸು, ಆರೋಗ್ಯ ವಾತಾವರಣ ಲಭಿಸುತ್ತದೆ ಆಗ ಮಾತ್ರ ಭಗವಂತ ಕೊಟ್ಟ ಆಯುಷ್ಯ ಪೂರ್ಣ ಅನುಭವಿಸಲು ಸಾಧ್ಯ, ದೇವರ ಸ್ಮರಣೆ ಭಕ್ತಿಭಾವದ ಮನಸ್ಸು ಪ್ರಸನ್ನವಾಗಿರುತ್ತದೆ ಎಂದು ಹೇಳಿದರು.

ಭಗವಂತನ ಶಾಂತ ಕೃಪಾದೃಷ್ಟಿ ನಮ್ಮ ಮೇಲೆ ಬೀಳಲಿ ಎಂಬ ಉದ್ದೇಶದಿಂದ ನಾವೆಲ್ಲ ದೇವಸ್ಥಾನಗಳಿಗೆ ಹೋಗುತ್ತೇವೆ ಅದರಲ್ಲಿ ವೈಜ್ಞಾನಿಕ ಅಂಶವೂ ಅಡಗಿದೆ. ಭಗವಂತನ ಸ್ಮರಣೆ ಎಷ್ಟು ಮಾಡಿದರೂ ಕಡಿಮೆಯೇ, ಮನುಷ್ಯನ ನೆಮ್ಮದಿಗೆ ಭಗವಂತನೇ ಹಾದಿ ಎಂದು ತಿಳಿಸಿದರು.

ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ಕಶ್ಯಪ್, ಗೌರಿಶಂಕರನಗರದ ಶಿವಕುಮಾರ್, ಎಸ್ ಎನ್ ರಾಜೇಶ್ ,ಭೈರತಿ ಲಿಂಗರಾಜು, ಚಕ್ರಪಾಣಿ, ಸುಚಿಂದ್ರ, ದಯಾನಂದ್, ಸುನಿಲ್ ಕುಮಾರ್, ಮಹಾದೇವ್, ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.


Share this with Friends

Related Post