Thu. Mar 5th, 2026

10 ಎಕರೆ ಜಮೀನು ಕಬಳಿಕೆ ಆರೋಪ:ಸತ್ವ ಗ್ರೂಪ್‌ನ ಅಶ್ವಿನ್ ಸಂಚೆಟಿ ಬಂಧನ

Share this with Friends

ಬೆಂಗಳೂರು: ಬಂಡಾಪುರ ಗ್ರಾಾಮದಲ್ಲಿ 10 ಎಕರೆ ಜಮೀನು ಕಬಳಿಕೆಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಹಿನ್ನಲೆಯಲ್ಲಿ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಸತ್ವ ಗ್ರೂಪ್‌ನ ಅಶ್ವಿನ್ ಸಂಚೆಟಿ ಅವರನ್ನು ಆವಲಹಳ್ಳಿ ಪೊಲೀಸರು ವಶಕ್ಕೆೆ ಪಡೆದಿದ್ದು,ಉಳಿದ ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ‌

ಜಮೀನಿನ ಮೂಲ ಮಾಲೀಕರಾದ ರಾಧ ರವರ ಬಳಿ ಜಿಪಿಎ ಪಡೆದಿರುವ ವೆಂಕಟಪ್ಪ ಅವರು ಅವಲಹಳ್ಳಿ ಠಾಣಾ ವ್ಯಾಾಪ್ತಿಯಲ್ಲಿರುವ 10 ಎಕರೆ ಜಮೀನನ್ನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅ.22 ರಂದು ದೂರು ದಾಖಲಿಸಿದ್ದರು ಅದರಂತೆ ಆರೋಪಿಗಳಾದ ಅಶ್ವಿನ್ ಸಂಚೆಟಿ, ಬಸವೇಶ್ವರ ನಗರದ ನಿವಾಸಿ ರಾಧಾ, ಲೋಕ ಸುಂದರ್, ಧೃವ ಕುಮಾರ್, ಮೀನಾಕ್ಷಿಿ, ಡಾ.ಲಾವಣ್ಯ, ಡಾಲರ್ಸ್ ಕಾಲೊನಿಯ ನಿವಾಸಿ ರಾಧಾ, ವೆಂಟಕರಾಮ ನಾಯ್ಡು ಕೋಲ, ಶಿವರುದ್ರಪ್ಪ, ಶ್ರೀನಿವಾಸ್ ಆರ್.ಅಲಕಟ್ಟಿ, ಶಿವಶ್ರೀ ಮೀಡಿಯಾ ಪ್ರೈ.ಲಿ.ಲಿಂಗರಾಜ್, ಮಧುಸೂದರ್ ಮತ್ತು ಮುನೇಂದ್ರ ಅವರ ಮೇಲೆ ಎಫ್‌ಐಆರ್ ದಾಖಲಾಗಿದೆ.

ಬಂಡಾಪುರ ಗ್ರಾಾಮದ ಸರ್ವೇ ನಂ 20,21,44/1 ರಲ್ಲಿ 10 ಎಕರೆ ಜಮೀನು ಇದೆ. 1978 ರಲ್ಲಿ ಮೂಲ ಮಾಲೀಕರಾದ ಮುದ್ದಪ್ಪರಿಂದ ಕೃಷ್ಣನ್ ಮತ್ತು ರಾಧ ದಂಪತಿಗಳು ಖರೀದಿ ಮಾಡಿದ್ದರು. ಇದಾದ ಬಳಿಕ 1986 ರಲ್ಲಿ ಕೃಷ್ಣನ್ ಮೃತ ಪಟ್ಟಿಿದ್ದರು. ದಂಪತಿಗೆ ಮಕ್ಕಳು ಇಲ್ಲದ ಕಾರಣ ತನ್ನ ಹುಟ್ಟೂರಿಗೆ ರಾಧ ತೆರಳಿದ್ದರು. ಕೃಷ್ಣನ್ ಮೃತ ಪಟ್ಟ ನಂತರ ಪೌತಿ ಖಾತೆಯಾಗಿ ರಾಧರ ಹೆಸರಿಗೆ ಖಾತೆಯಾಗಿತ್ತು. ಪತಿ ಮೃತರಾದ ನಂತರ ತಮಿಳುನಾಡಿಗೆ ರಾಧ ತಮಿಳುನಾಡಿಗೆ ತೆರಳಿದ್ದರು. ತಮಿಳನಾಡಿನಿಂದ ಬಂದು ಜಮೀನು ಬಳಿ ನೋಡಿದಾಗ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿರುವುದು ತಿಳಿದು ಬಂತು.  1976 ರಿಂದ ಖಾಲಿ ಇದ್ದ ಜಮೀನಿನ ಮೇಲೆ ಮೂರು ಆರೋಪಿಗಳ ತಂಡ ಕಣ್ಣು ಹಾಕಿತ್ತು. 2022 ರಿಂದ ವಿವಿಧ ನಕಲಿ ದಾಖಲೆ ಸೃಷ್ಟಿಸಿ ಕೋರ್ಟ್‌ಗೆ ಸಲ್ಲಿಸಿ ಕೋರ್ಟ್ ಮುಖಾಂತರ ಆರೋಪಿಗಳು ಖಾತೆ ಮಾಡಿಸಿಕೊಂಡಿದ್ದಾರೆ. ಈ ಕುರಿತು ಮೂಲ ದಾಖಲೆಗಳನ್ನು ರಿಜಿನಲ್ ಕಮಿಷನರ್‌ಗೆ ಸಲ್ಲಿಸಿ ರಾಧ ದೂರು ದಾಲಿಸಿದರು. ಸದ್ಯ ದಾಖಲೆ ಪ್ರಕಾರ ಮತ್ತೆೆ ರಾಧರವರ ಹೆಸರಿಗೆ ಖಾತೆ ಮಾಡಿ ಕೊಳ್ಳಲು ಸೂಚನೆ ನೀಡಲಾಗಿದೆ.

ಆರೋಪಿಯನ್ನು ವಶಕ್ಕೆೆ ಪಡೆದ ಪೊಲೀಸರು:

ನಕಲಿ ದಾಖಲೆ ಸೃಷ್ಟಿಸಿ ಸಾವಿರಾರು ಕೋಟಿ ಬೆಲೆ ಜಮೀನು ಕಬಳಿಕೆ ಆರೋಪ ಸಂಬಂಧ ಸತ್ವ ಗ್ರೂಪ್‌ನ ಅಶ್ವಿನ್ ಸಂಚೆಟಿ ಅವರನ್ನು ಆವಲಹಳ್ಳಿ ಪೊಲೀಸರು ವಶಕ್ಕೆೆ ಪಡೆದಿದ್ದಾರೆ. ಉಳಿದ ಆರೋಪಿಗಳಿಗೆ ಹುಡುಕಾಟ ನಡೆಸಲಾಗುತ್ತಿದ್ದು,ಭೂ ಕಬಳಿಕೆ ಸಂಬಂಧ ತನಿಖೆ ನಡೆಸಲಾಗುತ್ತಿದೆ.


Share this with Friends

Related Post