Sat. Nov 2nd, 2024

ಆರೋಗ್ಯಕರ ಜೀವನಕ್ಕಾಗಿ ಪ್ರಕೃತಿ ಉಳಿಸಿ ಬೆಳೆಸಿ-ರಾಜೇಶ್ವರಿ ನಾಗರಾಜ್ ಸಲಹೆ

Share this with Friends

ಮೈಸೂರು,ಜೂ.10: ಆರೋಗ್ಯಕರ ಜೀವನಕ್ಕಾಗಿ ಪ್ರಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಆದಿಚುಂಚನಗಿರಿ ಮಹಿಳಾ ಒಕ್ಕಲಿಗ ಸಮಾಜದ ಉಪಾಧ್ಯಕ್ಷೆ ರಾಜೇಶ್ವರಿ ನಾಗರಾಜ್ ಸಲಹೆ ನೀಡಿದರು.

ಕುವೆಂಪು ನಗರದ ಆದಿಚುಂಚನಗಿರಿ ಮಹಿಳಾ ಒಕ್ಕಲಿಗ ಸಮಾಜದ ವತಿಯಿಂದ
ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಸಿವೆ ಉಸಿರು ಎಂಬ ಶೀರ್ಷಿಕೆಯಡಿ ಮನೆಗೊಂದು ಗಿಡ ಊರಿಗೊಂದು ವನ ಎನ್ನುವ ದ್ಯೇಯ್ಯ ವಾಕ್ಯದಡಿ ಸಂಘದ ಸದಸ್ಯರಿಗೆ ವಿವಿಧ ಜಾತಿಯ ಗಿಡ ವಿತರಿಸಿ ಅವರು ಮಾತನಾಡಿದರು.

ಮನುಷ್ಯ ಉತ್ತಮ ಪರಿಸರ ಇಲ್ಲದೇ ಬದುಕಲು ಸಾಧ್ಯವಿಲ್ಲ, ಅರಣ್ಯ ನಾಶದ ಪರಿಣಾಮವಾಗಿ ಪ್ರಸ್ತುತ ವರ್ಷ ಉಷ್ಣಾಂಶ ಹೆಚ್ಚಿತ್ತು. ಮಳೆ ಪ್ರಮಾಣ ಹೆಚ್ಚಿ, ಆ ಮೂಲಕ ಅಂತರ್ಜಲ ಮಟ್ಟ ಹೆಚ್ಚಲು ಅರಣ್ಯವನ್ನು ಉಳಿಸಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಟ್ರೈಬಲ್ ಕಲಾವಿದೆ
ಸುಮಾ ಪ್ರಶಾಂತ್ ಅವರು ಪರಿಸರಕ್ಕೆ ಸಂಬಂಧಪಟ್ಟ ಜಾನಪದ ಹಾಡು ಹಾಡುವ ಮೂಲಕ ವಿಶೇಷ ಗಮನ ಸೆಳೆದರು

ಸಂಘದ ಅಧ್ಯಕ್ಷೆ ಸವಿತಾ ಗೌಡ,
ಸಂಘದ ಪದಾಧಿಕಾರಿಗಳಾದ ಸವಿತಾ ಜಗದೀಶ್, ತ್ರಿವೇಣಿ ವಿಶ್ವನಾಥ್, ಜ್ಯೋತಿ ರವಿ, ಲಕ್ಷ್ಮೀ ಜಯರಾಮ್, ಉಮಾ, ಮಮತಾ ಪುರುಷೋತ್ತಮ್, ಅನ್ವಿತಾ ಮತ್ತಿತರಯ ಉಪಸ್ಥಿತರಿದ್ದರು.


Share this with Friends

Related Post