ಮೈಸೂರು,ಏ.19: ಮೈಸೂರಿನಲ್ಲಿ ನಕಲಿ ಫೆವಿಕ್ವಿಕ್ ಮಾರಾಟ ಮಾಡುತ್ತಿದ್ದ ಏಜೆನ್ಸಿ ಮೇಲೆ ದೇವರಾಜ ಠಾಣೆ ಪೊಲೀಸರು ದಾಳಿ ನಡೆಸಿ ಮಾಲೀಕನನ್ನು ಬಂಧಿಸಿದ್ದಾರೆ.
ಸಂತೆಪೇಟೆಯಲ್ಲಿರುವ ಮಹೇಶ್ ಎಜೆನ್ಸಿ ಮಾರ್ಕೆಟಿಂಗ್ ಅಂಗಡಿಯಲ್ಲಿ ಪೆಡಿಲೈಟ್ ಕಂಪನಿಯ ನಕಲಿ ಫೆವಿಕ್ವಿಕ್ ಗಳನ್ನ ಮಾರಾಟ ಮಾಡುತ್ತಿರುವ ಬಗ್ಗೆ ಕಂಪನಿಯ ಅಧಿಕೃತ ಪ್ರತಿನಿಧಿ ಜಿ ಪೂಬಾಲನ್ ಹಾಗೂ ಶೇಕ್ ಖಾಸಿಂ ರವರಿಗೆ ಮಾಹಿತಿ ದೊರೆತಿದೆ.
ತಕ್ಷಣ ಅಲರ್ಟ್ ಆದ ಅವರಿಬ್ಬರು ಎರಡು ದಿನಗಳ ಹಿಂದೆ ಅಂಗಡಿಯಿಂದ ಫೆವಿಕ್ವಿಕ್ ಖರೀದಿಸಿ ಪರಿಶೀಲಿಸಿದ್ದಾರೆ ಆಗ ಅಸಲಿ ಪ್ಯಾಕಿಂಗ್ ಗೆ ಹೋಲಿಕೆ ಆಗುವಂತೆ ಡ್ಯೂಪ್ಲಿಕೇಟ್ ತಯಾರಿಸಿ ಫೆವಿಕ್ವಿಕ್ ಮಾರಾಟ ಮಾಡುತ್ತಿರುವುದು ಖಚಿತವಾಗಿದೆ.
ನಂತರ ಅವರಿಬ್ಬರು ದೇವರಾಜ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದರು.
ಎಫ್ ಐ ಆರ್ ದಾಖಲಿಸಿಕೊಂಡ ಪೊಲೀಸರು, ಮಹೇಶ್ ಎಜೆನ್ಸಿಯ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿ ಒಟ್ಟು 1860 ಫೆವಿಕ್ವಿಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಗಡಿಯ ಮಾಲೀಕ ವರದಾರಾಮ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ದಾಳಿಯಲ್ಲಿ ದೇವರಾಜ ಠಾಣೆಯ ಇನ್ಸ್ ಪೆಕ್ಟರ್ ಟಿ. ಬಿ. ಶಿವಕುಮಾರ್, ಸಬ್ ಇನ್ಸ್ ಪೆಕ್ಟರ್ ಎಂ. ಜೈ ಕೀರ್ತಿ, ಪಿಡಿಲೈಟ್ ಕಂಪನಿಯ ಪ್ರತಿನಿಧಿ ಪೂಬಾಲನ್, ಶೇಕ್ ಖಾಸಿಂ ಹಾಗೂ ಸಿಬ್ಬಂದಿ ಮಂಚನಾಯಕ್, ಶಿವರಾಜು, ಮನೋಹರ್, ಮಂಜುನಾಥ್ ಭಾಗವಹಿಸಿದ್ದರು.
ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ,ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಹಾಗೂ ಅಪರಾದ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಅವರು ಶ್ಲಾಘಿಸಿದ್ದಾರೆ.