Tue. Dec 24th, 2024

ಕೊಡಗು ಜಿಲ್ಲೆಯ ಹೋಮ್ ಮೇಡ್ ವೈನ್ ಮಾರಾಟ:ವ್ಯಕ್ತಿ‌ ಅರೆಸ್ಟ್

Share this with Friends

ಚಾಮರಾಜನಗರ,ಮಾ.19: ಅಕ್ರಮವಾಗಿ ಕೊಡಗು ಜಿಲ್ಲೆಯ ಹೋಮ್ ಮೇಡ್ ವೈನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಬೇಗೂರು ನಿವಾಸಿ ದಿನೇಶ್ ನಾಯ್ಡು ಕೆ ಬಂಧಿತ ಆರೋಪಿ

ಅಬಕಾರಿ ಜಂಟಿ ಆಯುಕ್ತರು ಮೈಸೂರು ವಿಭಾಗದ ಫಕೀರಪ್ಪ ಹೆಚ್ ಛಲುವಾದಿ,
ಚಾಮರಾಜನಗರ ಅಬಕಾರಿ ಉಪ ಆಯುಕ್ತ ನಾಗಶಯನ ಅವರ ಮಾರ್ಗದರ್ಶನ ದಲ್ಲಿ ಗುಂಡ್ಲುಪೇಟೆ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹೋಮ್ ಮೇಡ್ ವೈನ್ ಮಾರಾಟ ಮಾಡುತ್ತಿದ್ದ ದಿನೇಶ್ ನಾಯ್ಡು ಕೆ ಎಂಬಾತನನ್ನು ಬಂಧಿಸಿ 304000 ರೂ ಮೌಲ್ಯದ 750 ಮಿಲಿಯ 380 ಬಾಟಲಿಗಳು ಒಟ್ಟು 285 ಲೀಟರ್ ವೈನ್ ವಶಕ್ಕೆ ಪಡೆಯಲಾಗಿದೆ.

ಆರೋಪಿ ವಿರುದ್ಧ ಅಬಕಾರಿ ನಿರೀಕ್ಷಕರು ಗುಂಡ್ಲುಪೇಟೆ ವಲಯ ಮಂಜ ನಾಯ್ಕ ಆರ್ ಅವರು ಮೊಕದ್ದಮೆ ದಾಖಲಿಸಿ ನ್ಯಾಲಯಕ್ಕೆ ಹಾಜರುಪಡಿಸಿದರು.

ವಲಯ ಸಿಬ್ಬಂದಿಗಳಾದ, ಅಬಕಾರಿ ಮುಖ್ಯ ಪೇದೆ ಭಾಸ್ಕರ್, ಅಬಕಾರಿ ಪೇದೆಗಳಾದ ಷಣ್ಮುಖ, ಕುಮಾರ ಸ್ವಾಮಿ, ಸಿದ್ದೇಶ್ ಮತ್ತು ವಾಹನ ಚಾಲಕ ಸೋಮಣ್ಣ ದಾಳಿಯಲ್ಲಿ ಪಾಲ್ಗೊಂಡಿದ್ದರು.


Share this with Friends

Related Post