Wed. Dec 25th, 2024

ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿ ಹತ್ಯೆ

Share this with Friends

ಮೈಸೂರು, ಜೂ.10: ಸಾಂಸ್ಕೃತಿಕ ನಗರಿಯಲ್ಲಿ ಹಿರಿಯ‌ ಸ್ವಾಮೀಜಿಯೊಬ್ಬರನ್ನು ಹತ್ಯೆ ಮಾಡಲಾಗಿದ್ದು ಭಕ್ತರು ಬೆಚ್ಚಿಬಿದ್ದಿದ್ದಾರೆ.

ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿಯವರನ್ನು ಮಠದ ಅವರ ಕೊಠಡಿಯಲ್ಲೇ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಲಾಗಿದೆ.

ಸ್ವಾಮೀಜಿ ಅವರ ಭದ್ರತಾ ಸಿಬ್ಬಂದಿ ಸಹಾಯಕನಾಗಿದ್ದ ರವಿ(60) ಎಂಬಾತ ಸ್ವಾಮೀಜಿಯವರನ್ನು ಹತ್ಯೆ ಮಾಡಿದ್ದಾನೆಂದು
ಮಠದಲ್ಲಿದ್ದ‌ ಕೆಲವರು ದೂರಿದ್ದಾರೆ.

ಮಠಕ್ಕೆ ನಜರ್‌ಬಾದ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಅಲ್ಲಿದ್ದ ಸಿಬ್ಬಂದಿಗಳು ಮತ್ತು ಮಠದಲ್ಲಿದ್ದವರಿಂದ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೊಲೆಯಾದ ಸ್ವಾಮೀಜಿ ಅತ್ಯಂತ ಹಿರಿಯರು ಈ ಕೊಲೆ ಯಾವ ಕಾರಣಕ್ಕಾಗಿ ನಡೆದಿದೆ ಎಂದು ಗೊತ್ತಿಲ್ಲ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕೆಂದು ಮಠದದಲ್ಲಿದ್ದವರು ಆಗ್ರಹಿಸಿದ್ದಾರೆ.


Share this with Friends

Related Post