Tue. Dec 24th, 2024

ಹಿಂದೂ ಧರ್ಮದ ಉಳಿವಿಗೆ ದೇಶ ಪರ್ಯಟನೆ ಮಾಡಿದ ಶಂಕರರು: ಶ್ರೀವತ್ಸ

Share this with Friends

ಮೈಸೂರು, ಮೇ.12: ಶಂಕರಾಚಾರ್ಯರು ಹಿಂದೂ ಧರ್ಮದ ಉಳಿವಿಗಾಗಿ ಭಾರತವನ್ನ ಕಾಲ್ನಡಿಗೆಯಲ್ಲಿ 3ಬಾರಿ ಪರ್ಯಟನೆ ಮಾಡಿ 4ಪೀಠಗಳನ್ನ ಸ್ಥಾಪಿಸಿದ್ದಾರೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.

ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ತತ್ವಜ್ಞಾನಿ ದಿನಾಚರಣೆ ವೇಳೆ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಹಿಂದೂ ಧರ್ಮವನ್ನ ಪುನರತ್ಥಾನಗೊಳಿಸಿದ ಶಂಕರರು ಸಹಸ್ರಾಮಾನದ ಹಿಂದೆಯೇ ಸಾಮಾಜಿಕ ಸಾಮರಸ್ಯ ಸಂದೇಶ ಸಾರಿದ ರಾಮಾನುಜರು ಇಬ್ಬರು ಮಹನೀಯರ ಧ್ಯೇಯ ಸಿದ್ದಾಂತಗಳು ಹಿಂದೂ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಧಾರ್ಮಿಕ ಆಧ್ಯಾತ್ಮಿಕವಲ್ಲದೇ ಸಾಂಸ್ಕೃತಿಕ ವೈಜ್ಞಾನಿಕವಾಗಿಯೂ ಹಲವಾರು ಕೊಡುಗೆಗಳನ್ನ ನೀಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿರವರು ಶಂಕರ ಜಯಂತಿಯನ್ನ ವಿಶ್ವ ತತ್ವಜ್ಞಾನಿ ದಿನಾಚರಣೆ ಎಂದು ಘೋಷಿಸಿದ್ದಾರೆ ಎಂದು ಶ್ರೀವತ್ಸ ತಿಳಿಸಿದರು.

ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಮಾತನಾಡಿ ಶಂಕರಾಚಾರ್ಯರು ಕೇವಲ 32 ವರ್ಷ ಬಾಳಿದರೂ ಅವರು ಹಿಂದೂ ಧರ್ಮವನ್ನು ದೇಶದೆಲ್ಲಡೆ ಪ್ರಜ್ವಲಿಸಿದರು, ಶಂಕರ ತತ್ವಗಳು‌ ಯುವ ಮನಸ್ಸುಗಳನ್ನ ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು.

ಮೈಲಾಕ್ ಅಧ್ಯಕ್ಷ ಎನ್. ವಿ ಪನೀಶ್, ಮಾಜಿ ಮಹಾಪೌರರಾದ ಶಿವಕುಮಾರ್, ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಎಚ್‌ ಜಿ ಗಿರಿಧರ್, ಕೇಬಲ್ ಮಹೇಶ್, ಗೋಪಾಲ್ ರಾವ್,ನಗರ ಉಪಾಧ್ಯಕ್ಷ ಜೋಗಿ ಮಂಜು, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್,ಬಿ.ವಿ.ಮಂಜುನಾಥ ಚಾಮುಂಡೇಶ್ವರಿ ಕ್ಷೇತ್ರದ ನಗರ ಅಧ್ಯಕ್ಷರಾದ ರಾಕೇಶ್ ಭಟ್, ಚಾಮುಂಡೇಶ್ವರಿ ಕ್ಷೇತ್ರದ ಮಂಡಲ ಅಧ್ಯಕ್ಷ ಪೈ. ಟಿ. ರವಿ,ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ,ಎಸ್ಸಿ ಮೊರ್ಚಾ ಅಧ್ಯಕ್ಷ ಶೈಲೇಂದ್ರ, ಅಜಯ್ ಶಾಸ್ತ್ರಿ, ಕೆ ಎಂ ನಿಶಾಂತ್, ಮೂಡ ಮಾಜಿ ಸದಸ್ಯ ನವೀನ್ ಕುಮಾರ್, ಜಗದೀಶ್, ಎಂ ಆರ್ ಬಾಲಕೃಷ್ಣ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.


Share this with Friends

Related Post