Tue. Dec 24th, 2024

ಶಂಕರರ ತತ್ವ ಎಂದೆಂದಿಗೂ ಪ್ರಸ್ತುತ : ರಾಕೇಶ್ ಭಟ್

Share this with Friends

ಮೈಸೂರು, ಮೇ.22: ವೇದ, ಸಂಸ್ಕೃತಿಯನ್ನು ವಿಶ್ವಕ್ಕೆ ನೀಡಿದ ಶಂಕರಾಚಾರ್ಯರರ ತತ್ವಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂದು ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್ ಹೇಳಿದರು.

ನಗರದ ಬೋಗಾದಿಯ ರವಿಶಂಕರ್ ಲೇಔಟ್ ನಲ್ಲಿ ಜನಸೇವಕ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯ ಜಯಂತಿ ಅಂಗವಾಗಿ ಪುಷ್ಪ ನಮನ ಸಲ್ಲಿಸಿ, ನಂತರ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.

ಎಳೆಯ ವಯಸ್ಸಿನಲ್ಲಿಯೇ ವೇದ ಅಧ್ಯಯನ ಮಾಡಿ ಶಂಕರರು ಪ್ರಸಿದ್ಧರಾದರು, ಒಬ್ಬ ಬಡ ವಿಧವೆ ಮನೆಗೆ ಹೋಗಿ ಭಿಕ್ಷೆ ಬೇಡಿದಾಗ ಕೊಡಲು ಏನೂ ಇಲ್ಲದೆ ಒಣಗಿದ ಒಂದು ನೆಲ್ಲಿಕಾಯಿಯನ್ನು ಭಿಕ್ಷೆ ಹಾಕುತ್ತಾಳೆ. ಅದರಿಂದಲೇ ಸಂತುಷ್ಟರಾಗಿ ಅಲ್ಲಿಯೇ ಕನಕಧಾರಾ ಸ್ತೋತ್ರವನ್ನು ರಚಿಸುತ್ತಾರೆ. ಆ ಮನೆಯನ್ನು ಈಗಲೂ ಕಾಲಟಿಯಲ್ಲಿ ನೋಡಬಹುದಾಗಿದೆ ಎಂದು ತಿಳಿಸಿದರು.

ದೇಶದ ಮೂಲೆ ಮೂಲೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ ನಾಲ್ಕು ಪ್ರಮುಖ ಶಿಷ್ಯರನ್ನು ಪೀಠಾಧಿಪತಿಗಳನ್ನಾಗಿ ನೇಮಿಸಿ ನಿತ್ಯ ಉಪಾಸನೆ ಪೂಜೆ ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಸನಾತನ ವೈದಿಕ ಧರ್ಮ ಪುನರುತ್ಥಾನಗೊಳಿಸಿ ಕಾಶ್ಮೀರದ ಸರ್ವಜ್ಞ ಪೀಠಾರೋಹಣ ಮಾಡಿದ ಪ್ರಥಮ ದಾಕ್ಷಿಣಾತ್ಯರು ಶಂಕರರು ಎಂದು ಹೇಳಿದರು.

ಬಿಜೆಪಿಯ ಮೈಸೂರು ಜಿಲ್ಲಾ ಕಾರ್ಯದರ್ಶಿ ಮೋನಿಕಾ, ಪ್ರಾಣವ್ಯ ಎಜುಕೇಶನ್ ಟ್ರಸ್ಟ್ ನಿರ್ದೇಶಕಿ ಸವಿತಾ ಪುಟ್ಟೇಗೌಡ, ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ , ನಂಜುಂಡಸ್ವಾಮಿ, ಬಸಪ್ಪ, ವೀರೇಶ್, ಮಾಯ ಶಾನ್ ಬಾಗ್, ರಮ್ಯಾ, ಗೀತಾ, ರವಿಕುಮಾರ್, ಚೆಲುವ ರಾಜು, ಡಾಕ್ಟರ್ ಸುನಿಲ್, ಅರಣ್ಯ ಅಧಿಕಾರಿ ನಂದಕುಮಾರ್, ಭವಾನಿ ಶಂಕರ್, ದೇಶಪಾಂಡೆ, ಭಾಸ್ಕರ್, ರಾಮ್ ಮೂರ್ತಿ, ರಂಗೇಗೌಡ, ಮತ್ತಿತರರು ಹಾಜರಿದ್ದರು.


Share this with Friends

Related Post