Mon. Dec 23rd, 2024

ಚಾನ್ಸ್ ಕೊಡಿ, ಗೀತಾ ಸರಿಯಾಗಿ ಕೆಲಸ ಮಾಡದಿದ್ರೆ ನನ್ನ ಚೇಂಜ್ ಮಾಡ್ಕೋತೀನಿ : ಶಿವಣ್ಣ

geetha shivarajkumar
Share this with Friends

ಶಿವಮೊಗ್ಗ, ಮಾ.26: ಶಿವಮೊಗ್ಗದಲ್ಲಿ ಪತ್ನಿ ಪರವಾಗಿ ನಟ ಶಿವರಾಜ್‌ ಕುಮಾರ್‌ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. . ನಟ ಶಿವರಾಜ್​ಕುಮಾರ್ ಅವರು ಇತ್ತೀಚೆಗೆ ಶಿವಮೊಗ್ಗದಲ್ಲಿ ಮಾತನಾಡಿದ್ದು, ಪತ್ನಿ ಗೀತಾ ಗೆದ್ದರೆ ಜನರ ಪರವಾಗಿ ಅವರು ಕೆಲಸ ಮಾಡುತ್ತಾರ, ‘ಗೀತಾಗೆ ಅವಕಾಶ ಕೊಟ್ಟುನೋಡಿ. ಅವರು ಜನರ ಪರವಾಗಿ ಕೆಲಸ ಮಾಡ್ತಾರೆ. ಆ ಬಳಿಕವೂ ಅವರು ಸರಿಯಾದ ಅಭ್ಯರ್ಥಿನ ಆಯ್ಕೆ ಮಾಡಿಲ್ಲ ಎನಿಸಿದರೆ ಹೆಸರು ಚೇಂಜ್ ಮಾಡ್ಕೋತೀನಿ ಎಂದು ಶಿವಣ್ಣ ಹೇಳಿದ್ದಾರೆ.

ಗಂಡನಾಗಿ ನಾನು ನನ್ನ ಕರ್ತವ್ಯವನ್ನ ನಿರ್ವಹಿಸುತ್ತಿದ್ದೇನೆ. ಒಂದು ಅವಕಾಶ ಕೊಟ್ಟು ನೋಡಿ , ನಾವು ಕೊಟ್ಟ ಮಾತನ್ನ ತಪ್ಪುವುದಿಲ್ಲ, ನಾವು ಜನರಿಂದ ಜನರಿಗಾಗಿ ಬದುಕಬೇಕು, ಸೇವೆಗಾಗಿ ಅವರು ಈಗಾಗಲೇ ಶಕ್ತಿಧಾಮವನ್ನ ನಡೆಸುತ್ತಿದ್ದಾರೆ. ಅಧಿಕಾರ ಬಂದ್ರೆ ಇನ್ನೂ ಪವರ್‌ ಫುಲ್‌ ಆಗಿ ಕೆಲಸ ಮಾಡಬಹುದು, ಆ ಪವರ್‌ ಫುಲ್‌ ಆಗಿ ಕೆಲಸ ಮಾಡಲು ನೀವು ಆಯ್ಕೆ ಮಾಡಬೇಕು ಎಂದು ಶಿವಣ್ಣ ಹೇಳಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ಟಿಕೆಟ್‌ ಘೋಷಣೆಯಾದ ದಿನದಿಂದಲೂ ಪತ್ನಿ ಪರವಾಗಿ ನಟ ಶಿವರಾಜ್‌ ಕುಮಾರ್‌ ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.


Share this with Friends

Related Post