Sat. Dec 28th, 2024

ದ್ವಾರಕೀಶ್ ನಿಧನಕ್ಕೆಶ್ರೀ ಬಸವಯೋಗಿಪ್ರಭುಗಳ ಸಂತಾಪ

Share this with Friends

ಚಿಕ್ಕಮಗಳೂರು,ಏ.17: ಖ್ಯಾತ ನಟ ದ್ವಾರಕೀಶ್ ನಿಧನಕ್ಕೆ ನರಸಿಂಹರಾಜಪುರ ಬಸವಕೇಂದ್ರದ ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ಅಂತಿಮ ನಮನ ಸಲ್ಲಿಸಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿರಿಯ ನಟ ನಿರ್ದೇಶಕ ನಿರ್ಮಾಪಕ ದ್ವಾರಕೀಶ್ ರವರು ಸಾಹಸಸಿಂಹ ವಿಷ್ಣುವರ್ಧನರವರ ಆಪ್ತ ಮಿತ್ರರಾಗಿದ್ದರು, ಕನ್ನಡ ಜನತೆಗೆ ಇವರಿಬ್ಬರ ಕಾಂಬಿನೇಷನ್ ಚಿತ್ರವೆಂದರೆ ಹಬ್ಬ ಎಂದು ಶ್ರೀಗಳು ಸ್ಮರಿಸಿದ್ದಾರೆ.

ದ್ವಾರಕೀಶ್ ಅವರು ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಕುಳ್ಳ ಎಂದು ಮನೆ ಮಾತಾಗಿದ್ದರು. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದ ಕಲಾವಿದರು.

ದ್ವಾರಕೀಶ್ ರವರು ಸಿಂಗಾಪುರದಲ್ಲಿ ರಾಜಾ ಕುಳ್ಳ ಎಂಬ ಕನ್ನಡ ಚಿತ್ರವನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಿದ ಮೊದಲ ನಿರ್ಮಾಪಕ, ನೀ ಬರೆದ ಕಾದಂಬರಿ, ಕಳ್ಳ ಕುಳ್ಳ, ಕಿಟ್ಟು ಪುಟ್ಟು, ಕಿಲಾಡಿಗಳು, ರಾಯರು ಬಂದರು ಮಾವನ ಮನೆಗೆ, ಆಪ್ತ ಮಿತ್ರದಂತಹ ಅನೇಕ ಚಿತ್ರ ಗಳನ್ನು ಕೊಟ್ಟಂತಹ ಕರ್ನಾಟಕದ ಕುಳ್ಳ ಭಾರತೀಯ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ ಎಂದು ತಮ್ಮ ಸಂತಾಪ ಸಂದೇಶದಲ್ಲಿ ಶ್ರೀ ಬಸವಯೋಗಿಪ್ರಭುಗಳು ಅಂತಿಮ ನಮನ ಸಲ್ಲಿಸಿದ್ದಾರೆ.


Share this with Friends

Related Post