Wed. Dec 25th, 2024

ವೈಭವದಿಂದ ನಡೆದ ಶ್ರೀ ಚಾಮುಂಡೇಶ್ವರಿ, ಶ್ರೀ ಕರುಮಾರಿಯಮ್ಮ ಕರಗ

Share this with Friends

ಮೈಸೂರು,ಆ.11: ಮೈಸೂರಿನ ಕನಕಗಿರಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಕರುಮಾರಿಯಮ್ಮನವರ 94 ನೇ ವರ್ಷದ ಕರಗ ಮಹೋತ್ಸವ ವೈಭವದಿಂದ ನೆರವೇರಿತು.

ರಾತ್ರಿ 8 ಗಂಟೆಗೆ ಆರಂಭವಾದ ವೈಭವದ ಮೆರವಣಿಗೆ ಮುಖ್ಯ ರಸ್ತೆಗಳಲ್ಲಿ ಸಾಗಿತು, ಸಾವಿರಾರು ಭಕ್ತರು ರಸ್ತೆಗಳ ಎರಡೂ ಬದಿ ನಿಂತು ಕರಗವನ್ನು ಕಣ್ತುಂಬಿಕೊಂಡರು.

ಹೂವಿನ ಅಲಂಕೃತ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಕರುಮಾರಿಯಮ್ಮನವರ ಕರಗ ಉತ್ಸವ ಸಾಗಿತು.

ಕರಗಮಹೋತ್ಸವದ ಮೆರವಣಿಗೆಯಲ್ಲಿ ಅಂಗಾಳ ಪರಮೇಶ್ವರಿ ವೈಭವ ರಥ ಸೆಳೆಯಿತು.ತಮಿಳುನಾಡಿನ ಪಂಬೈ ಮೇಳ,ನಾದಸ್ವರ,ತಮಟೆ ವಾದ್ಯ,ಆಟದ ಕರಗ ನೃತ್ಯ,ನಗಾರಿತಂಡ ಮೆರವಣಿಗೆಗೆ ಮೆರುಗು ನೀಡಿದವು.


Share this with Friends

Related Post