ಮೈಸೂರು, ಮೇ.26: ಶ್ರೀ ಆದಿ ಶಂಕರಾಚಾರ್ಯರು ಹಿಂದೂ ಧರ್ಮದ ಸಂಸ್ಥಾಪಕರು, ನಮ್ಮ ಸಂಸ್ಕೃತಿ ಪರಂಪರೆಗಳ ಬಗ್ಗೆ ಜಗತ್ತಿಗೆ ಸಾರಿ ಹೇಳಿದವರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್ ಮಂಜೇಗೌಡ ಹೇಳಿದರು.
ಮೈಸೂರಿನ ಶೃಂಗೇರಿ ಶಂಕರ ಮಠದಲ್ಲಿ ಕರ್ನಾಟಕ ಸೇನಾಪಡೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ವಿಶ್ವ ತತ್ವಜ್ಞಾನಿಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹೆಚ್ಚು ಅಂಕ ತೆಗೆದುಕೊಳ್ಳುವ ಜತೆಗೆ ನಮ್ಮ ದೇಶದ ಸಂಸ್ಕೃತಿ ಪರಂಪರೆಯನ್ನು ವಿಶ್ವದಲ್ಲೇ ಹರಡುವಂತೆ ಮಾಡಬೇಕು, ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಸೇನಾ ಪಡೆ ಶಂಕರಾಚಾರ್ಯ ಜಯಂತಿಯ ಅಂಗವಾಗಿ ತತ್ವಜ್ಞಾನಿಗಳ ದಿನಾಚರಣೆಯನ್ನು ಮಾಡಿ ವಿದ್ಯಾರ್ಥಿಗಳಿಗೆ ತತ್ವಜ್ಞಾನಿಗಳ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಮಂಜೇಗೌಡ ಹೇಳಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷ ಎಸ್. ಜಯಪ್ರಕಾಶ್, ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಖ್ಯಾತ ನರ ರೋಗ ತಜ್ಞ ಡಾ. ಶುಶೃತ್ ಗೌಡ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್ ಆದರ್ಶ್, ದಿ. ಸಿಟಿ ಕೋಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ ಎನ್ ಸ್ವರೂಪ್, ಖ್ಯಾತ ಪ್ರಸೂತಿ ಹಾಗೂ ಸ್ತ್ರೀ ಯೋಗ ತಜ್ಞೆ ಡಾ. ಕೆ.ವಿ ಲಕ್ಷ್ಮೀದೇವಿ, ಮೂಡ ಸಹಾಯಕ ಕಾರ್ಯ ನಿರ್ವಾಹಕ ವಲಯ ಅಧಿಕಾರಿ ಆರ್ ಸಿ ಕೆಂಪರಾಜ್ ಅವರುಗಳಿಗೆ ಶ್ರೀ ಶಂಕರಾಚಾರ್ಯ ತತ್ವ ಜ್ಞಾನಿ ಸೇವಾ ರತ್ನ ಪ್ರಶಸ್ತಿ ಪ್ರದಾನವನ್ನು ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಿ.ಟಿ ಪ್ರಕಾಶ್ ಅವರು ಮಾಡಿದವರು.
2023 -24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸುಮಾರು 42 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ದಿನೇಶ್ ಕೋಚಿಂಗ್ ಸೆಂಟರ್ ಮುಖ್ಯಸ್ಥ ಎನ್ ವಿ ದಿನೇಶ್ ನೀಡಿದರು.
ಶ್ರೀ ಶಂಕರಾಚಾರ್ಯರ ಪ್ರಧಾನ ಭಾಷಣವನ್ನು ಮಹಾರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉದಯಶಂಕರ್ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ. ಲೀಲ ಪ್ರಕಾಶ್ ಅವರು ಮಾಡಿದರು.
ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಚಾ.ರಂ ಶ್ರೀನಿವಾಸಗೌಡ, ವಿಜಯವಿಠ್ಠಲ ಕಾಲೇಜು ಪ್ರಾಂಶುಪಾಲ ಸತ್ಯಪ್ರಸಾದ್, ಹೆಚ್ ಕೆ ಪಾಂಡು, ಸುರೇಶ್ ಗೋಲ್ಡ್, ಕರ್ನಾಟಕ ಸೇನಾ ಪಡೆಯ ಪ್ರಭುಶಂಕರ್ ಎಂ ಬಿ, ಕೃಷ್ಣಯ್ಯ, ಪ್ರಜೀಶ್ ಪಿ, ಶಾಂತರಾಜೇಅರಸ್, ಅಂಬಾ ಅರಸ್,ಹನುಮಂತಯ್ಯ, ಕುಮಾರ್ ಗೌಡ, ನೇಹಾ, ವಿಜಯೇಂದ್ರ ,ಗಣೇಶ ಪ್ರಸಾದ್, ರಮೇಶ್, ಪ್ರಭಾಕರ್, ನರಸಿಂಹೇ ಗೌಡ, ಸಿಂದುವಳ್ಳೀ ಶಿವಕುಮಾರ್, ರವೀಶ್, ಹನುಮಂತೇಗೌಡ, ವಿಷ್ಣು ಮತ್ತಿತರರು ಉಪಸ್ಥಿತರಿದ್ದರು.