Tue. Dec 24th, 2024

ಶ್ರೀಕಂಠೇಶ್ವರ ಪಂಚಮಹಾರಥೋತ್ಸವಕ್ಕೆ ಕ್ಷಣಗಣನೆ

Share this with Friends

ನಂಜನಗೂಡು,ಮಾ.21: ನಾಳೆ ದಕ್ಷಿಣಕಾಶಿ ನಂಜನಗೂಡಿನ ನಂಜುಂಡೇಶ್ವರ ದೊಡ್ಡ ಜಾತ್ರಾ ಮಹೋತ್ಸವ ನೆರವೇರಲಿದ್ದು,ಕ್ಷಣಗಣನೆ ಪ್ರಾರಂಭವಾಗಿದೆ

ರಾಜ ಬೀದಿಯಲ್ಲಿ ಸಾಗಲು ಸಿದ್ದಗೊಂಡ 108 ಅಡಿ ಎತ್ತರದ ಗೌತಮ ಪಂಚ ಮಹಾ ರಥ ಸಜ್ಜಾಗಿದೆ.ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ರಾಜ್ಯ,ಹೊರರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಯಾವುದೇ ತೊಂದರೆಯಾಗದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ತಾಲೂಕು ಆಡಳಿತ ಮಾಡಿದೆ.

ಕಪಿಲಾ ನದಿಯ ದಡದ ಸುತ್ತ ಮತ್ತು ರಥ ಸಂಚರಿಸುವ ಕಡೆ ಹೆಚ್ಚುವರಿ ಸಿ ಸಿ ಕ್ಯಾಮೆರಾ ಅಳವಡಿಸಲಾಗಿದ್ದು,ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ನಂಜುಂಡೇಶ್ವರನ ದೇವಾಲಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ವತಿಯಿಂದ ಭಕ್ತರಿಗೆ ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ ಎಂದು
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಗದೀಶ್ ಕುಮಾರ್ ತಿಳಿಸಿದ್ದಾರೆ.


Share this with Friends

Related Post