Mon. Dec 23rd, 2024

ಲೋಕಾಯುಕ್ತ ತನಿಖೆ ಎದುರಿಸಿದ ಸಿದ್ದರಾಮಯ್ಯ

Share this with Friends

ಮೈಸೂರು: ರಾಜ್ಯದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಮುಖ್ಯಮಂತ್ರಿ ಒಬ್ಬರು ಲೋಕಾಯುಕ್ತ ವಿಚಾರಣೆ ಎದುರಿಸಿದ್ದಾರೆ.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ಹಾಜರಾಗಿ ತನಿಖೆ ಎದುರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ಅಧಿಕಾರಿಗಳು 25ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಾರೆಂದು ತಿಳಿದು ಬಂದಿದೆ

ಕಾನೂನುನಾತ್ಮಕವಾಗಿ ನೀಡಿರುವ ಸೈಟನ್ನು ಏಕೆ ಹಿಂದಿರುಗಿಸಿದ್ದೀರಾ, 59:50 ಅನುಪಾತದ ಬಗ್ಗೆ ನಿಮಗೆ ಗೊತ್ತಿದೆಯ,
ನಿಮ್ಮ ಪತ್ನಿಗೆ ಸೈಟು ದೊರೆತ ಮೇಲೆ ನಿರ್ದಿಷ್ಟ ಸ್ಥಳವನ್ನು ಹೋಗಿ ನೀವು ನೋಡಿದ್ದಿರಾ,
ನಿಮ್ಮ ಭಾವ ಮೈದಾ ನಿಮ್ಮ ಪತ್ನಿಗೆ ನಿವೇಶನ ನೀಡಿದ ನಂತರ ನೀವು ಸ್ಥಳ ನೋಡಿರಲಿಲ್ಲವಾ,ಮುಡಾ ಹಗರಣ ಬೆಳಕಿಗೆ ಬಂದ ನಂತರ ಸೈಟ್ ಅನ್ನು ವಾಪಸ್ ಕೊಡುವುದಾಗಿ ಏಕೆ ಹೇಳಿದಿರಿ,
ನಿರ್ದಿಷ್ಟ ಸ್ಥಳದಲ್ಲಿ ಸೈಟ್ ಪಡೆಯಲು ನೀವು ಪ್ರಭಾವ ಬೀರಿದ್ದೀರಾ,ಸೈಟ್ ಹಂಚಿಕೆ ಕುರಿತು ಯಾರಿಗಾದರೂ ಕರೆ ಮಾಡಿ ಮಾತನಾಡಿದ್ದೀರಾ,ಮುಡಾ ಸೈಟ್ ಹಗರಣದಲ್ಲಿ ನಿಮ್ಮ ಪಾತ್ರ ಏನು ಎಂಬುದೂ ಸೇರಿದಂತೆ 25ಕ್ಕೂ ಹೆಚ್ಚು ಪ್ರಶ್ನೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಸಿದ್ದರಾಮಯ್ಯ ಅವರಿಗೆ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾಯುಕ್ತ ವಿಚಾರಣೆ ಆಗಮಿಸಿದ ಹಿನ್ನೆಲೆಯಲ್ಲಿ ಮೈಸೂರಿನ ಲೋಕಾಯುಕ್ತ ಕಚೇರಿ ಬಳಿ ಬಿಗಿ ಪೊಲೀಸ್ ಬಂದು ಬಸ್ತ್ ಮಾಡಲಾಗಿತ್ತು,ಮೂರು ಸುತ್ತಿನ ಪೊಲೀಸ್ ಬಂದು ಬಸ್ತ್ ಮಾಡಲಾಗಿದ್ದು 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು, ಜತೆಗೆ ಕೆಎಸ್ಆರ್‌ಪಿ ಸಿಆರ್ ತುಕುಡಿ ನಿಯೋಜನೆ ಮಾಡಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಿಂದ ಖಾಸಗಿ ಕಾರಿನಲ್ಲಿ ಮೈಸೂರಿಗೆ ಆಗಮಿಸಿ, ಸರ್ಕಾರಿ ಅತಿಥಿಗೃಹಕ್ಕೆ ತೆರಳಿ ಆನಂತರ ಲೋಕಾಯುಕ್ತ ಕಚೇರಿಗೆ ಆಗಮಿಸಿದರು.

ಸುಮಾರು ಎರಡು ಗಂಟೆಗಳ ಕಾಲ ಸಿದ್ದರಾಮಯ್ಯ ವಿಚಾರಣೆ ಎದುರಿಸಿದರು

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿಗರು ಶಾಸಕ ಶ್ರೀವತ್ಸ ನೇತೃತ್ವದಲ್ಲಿ
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಗೋ ಬ್ಯಾಕ್ ಸಿಎಂ ಎಂದು ಘೋಷಣೆಗಳನ್ನು ಕೂಗಿದರು.

ಇತ್ತ ಕಾಂಗ್ರೆಸ್ಸಿಗರು ಜೆ ಎಲ್ ಬಿ ರಸ್ತೆಯಲ್ಲಿ ಸೇರಿ ಮುಖ್ಯಮಂತ್ರಿಗಳ ಪರ ಘೋಷಣೆ ಕೂಗಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.


Share this with Friends

Related Post