Thu. Mar 5th, 2026

ಭಾರತಕ್ಕೆ ಸಿಂಧೂರ ತಿಲಕ: ಪಾಕ್‌‌ಗೆ ಮುಖಭಂಗ

Share this with Friends

ದುಬೈ: ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಭಾರತ ಜಯಭೇರಿ ಬಾರಿಸಿ ಏಷ್ಯಕಪ್ ಮುಡಿಗೇರಿಸಿಕೊಂಡಿದೆ.

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಭಾರತ 5 ವಿಕಟ್‌‌ಗಳಿಂದ ವಿಜಯ ಪಾತಕೆ ಹಾರಿಸಿತ್ತು.

ಟಾಸ್ ಸೋತು ಮೊದಲ ಬ್ಯಾಟಿಂಗ್ ಇಳಿದ ಪಾಕಿಸ್ತಾನ 19.1 ಓವರ್‌‌ಗೆ ಎಲ್ಲ ವಿಕೆಟ್ ಕಳೆದುಕೊಂಡು 146 ರನ್ ಕಲೆ ಹಾಕಿತ್ತು. ಆರಂಭದಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ಭಾರತ, ತಿಲಕ್ ವರ್ಮಾ ಹಾಗೂ ಶಿವಂ ದುಬೆ ಜೋಡಿ ಕೆಚ್ಚೆದೆಯ ಬ್ಯಾಂಟಿಗ್‌‌ ನಡೆಸುವ ಮೂಲಕ 3 ಎಸೆತ ಬಾಕಿ ಇರುವಾಗಲೇ ತಂಡಕ್ಕೆ ಜಯ ತಂದುಕೊಟ್ಟರು. ಈ ಮೂಲಕ ಪಾಕಿಸ್ತಾನಕ್ಕೆ ಭಾರತ, ಸಿಂದೂರ ಸ್ಟ್ರೇಕ್ ನಡೆಸಿತ್ತು.

ಹಸ್ತಲಾಘವ ಮಾಡದ ಭಾರತ:
ಪದ್ಯ ಗೆದ್ದ ಬಳಿಕ ಭಾರತ ಆಟಗಾರರು, ಪಾಕಿಸ್ತಾನ ಆಟಗಾರರಿಗೆ ಈ ಪಂದ್ಯದಲ್ಲೂ ಹಸ್ತಲಾಘವ ಮಾಡಲಿಲ್ಲ. ಈ ಮೂಲಕ ಪಾಕಿಸ್ತಾನಕ್ಕೆ ಮುಖಭಂಗ ಉಂಟಾಯಿತು.


Share this with Friends

Related Post