Tue. Dec 24th, 2024

ಅಮಲಿನಲ್ಲಿ ತಾಯಿಯ ಮೇಲೆ ಅತ್ಯಾಚಾರಎಸಗಿದ‌ ಪಾಪಿ ಮಗ

Share this with Friends

ಚಿಕ್ಕಬಳ್ಳಾಪುರ,ಆ.6: ಮದ್ಯದ ಅಮಲಿನಲ್ಲಿ ಪಾಪಿ ಮಗನೆ ತಾಯಿಯ ಮೇಲೆ ಅತ್ಯಾಚಾರ ನಡೆಸಿರುವ ಮೃಗೀಯ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ನಡೆದಿದೆ.

ತಸಲೂಕಿನ ಉಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ಇಂತಹ ಹೀನ ಕೃತ್ಯ ನಡೆದಿದ್ದು ತಡವಾಗಿ ಬೆಳಕಿಗೆ‌ ಬಂದಿದೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದೆ.ಪಾಪಿ ಮಗ ಬಳಿಕ ತಂದೆ, ತಾಯಿಯನ್ನು ತೀವ್ರವಾಗಿ ಹಲ್ಲೆ ಮಾಡಿ ಇಬ್ಬರನ್ನೂ ಮನೆ ಹಿಂಭಾಗದ ತಿಪ್ಪೆಗೆ ಎಸೆದು ಪರಾರಿಯಾಗಿದ್ದಾನೆ.

ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು,ಸಂತ್ರಸ್ತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಗೆ ಮದುವೆಯಾಗಿದ್ದು, ಪತ್ನಿ ಈತನಿಂದ ದೂರವಿದ್ದಾಳಂತೆ,ಹಾಗಾಗಿ ಈ ಪಾಪಿ ತಂದೆ, ತಾಯಿಯೊಂದಿಗೆ ವಾಸವಾಗಿದ್ದ

ಪೊಲೀಸ್ ಅಧಿಕಾರಿಗಳು ಅವರು ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರಿಂದ ಮಾಹಿತಿ ಪಡೆದುಕೊಂಡು ಸಾಂತ್ವಾನ ಹೇಳಿದ್ದಾರೆ.ಹೀನ ಮಗನನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ.


Share this with Friends

Related Post