Mon. Dec 23rd, 2024

ಊಟಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 6 ಕಾರ್ಮಿಕರ ದಾರುಣ ಸಾವು

Share this with Friends

ಊಟಿ,ಫೆ.7: ನಿರ್ಮಾಣ ಹಂತದ ಕಟ್ಟಡ ಕುಸಿದು 6 ಕಾರ್ಮಿಕರು ಸಾವನ್ನಪ್ಪಿರುವ ಘಟನೆ
ತಮಿಳುನಾಡಿನ ಊಟಿಯಲ್ಲಿ ನಡೆದಿದೆ.

ಘಟನೆ ತಮಿಳುನಾಡಿನ ಊಟಿಯ ಲವ್ ಡೇಲ್ ಬಳಿ ನಡೆದಿದೆ.

ಈ ಅವಘಡದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನಿಬ್ಬರು ಅವಶೇಷಗಳಡಿಯಲ್ಲಿ ಸಿಲುಕಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.

ಸಕಿಲಾ (30), ಸಂಗೀತಾ (35), ಭಾಗ್ಯ (36), ಉಮಾ (35), ಮುತ್ತುಲಕ್ಷ್ಮಿ (36), ಮತ್ತು ರಾಧಾ (38) ಮೃತಪಟ್ಟವರು.

ನಿರ್ಮಾಣ ಹಂತದಲ್ಲಿರುವ ಕಟ್ಟಡದ ಒಂದು ಭಾಗವು ಕುಸಿದು ಬಿದ್ದುದರಿಂದ ಈ ದುರ್ಘಟನೆ ನಡೆದಿದೆ.

ಗಾಯಾಳುಗಳನ್ನು ಊಟಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಊಟಿ ಸರ್ಕಾರಿ ಆಸ್ಪತ್ರೆಯ ಡೀನ್ ಪದ್ಮಿನಿ ಗಾಯಾಳುಗಳನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಿದ್ದಾರೆ.


Share this with Friends

Related Post