Fri. Mar 6th, 2026

ಹೊಸ ವರ್ಷಾರಂಭದಲ್ಲೇ ರೈಲುಗಳ ಸಂಚಾರದಲ್ಲಿ ಕೆಲ ಬದಲಾವಣೆ…!

Share this with Friends

ಬೆಂಗಳೂರು:ಹೊಸ ವರ್ಷಾರಂಭದಲ್ಲಿ ರೈಲು ಪ್ರಯಾಣಕ್ಕೆ ಸಿದ್ದರಾಗಿರುವ ರೈಲ್ವೆ ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ತಮ್ಮ ರೈಲುಗಳ ಸೇವೆಯಲ್ಲಿ ಬದಲಾವಣೆ ಆಗಿದೆಯಾ ಇಲ್ಲವಾ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.ಮೊದಲ ವಾರದಲ್ಲೇ ಹಲವು ರೈಲುಗಳ ರದ್ದತಿ/ಭಾಗಶಃ ರದ್ದತಿ/ನಿಯಂತ್ರಣ/ಮಾರ್ಗ ಬದಲಾವಣೆ ಮಾಡಲಾಗಿದೆ.

ಬಾಣಸವಾಡಿ ಮತ್ತು ಎಸ್‌.ಎಂ.ವಿ.ಟಿ. ಬೆಂಗಳೂರು ನಿಲ್ದಾಣದಲ್ಲಿ ಕಾಮಗಾರಿಯ ನಿಮಿತ್ತ ರೈಲು ಸೇವೆಯಲ್ಲಿ ಕೆಲವು ಬದಲಾವಣೆಗಳು ಜಾರಿಗೆ ಬರಲಿವೆ.ರೈಲುಗಳ ರದ್ದತಿ/ಭಾಗಶಃ ರದ್ದತಿ/ನಿಯಂತ್ರಣ/ಮಾರ್ಗ ಬದಲಾವಣೆ ಆಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ರೈಲುಗಳ ರದ್ದತಿ:

• ರೈಲು ಸಂಖ್ಯೆ 06527 ಬಂಗಾರಪೇಟೆ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು  ಮೆಮು ಸೇವೆಯನ್ನು ದಿನಾಂಕ 03.01.2026 ಮತ್ತು ದಿನಾಂಕ 04.01.2026 ರಂದು ರದ್ದುಗೊಳಿಸಲಾಗುತ್ತದೆ

• ರೈಲು ಸಂಖ್ಯೆ 06528 ಎಸ್‌.ಎಂ.ವಿ.ಟಿ. ಬೆಂಗಳೂರು – ಬಂಗಾರಪೇಟೆ ಮೆಮು ಸೇವೆಯನ್ನು ದಿನಾಂಕ 04.01.2026 ಮತ್ತು ದಿನಾಂಕ 05.01.2026 ರಂದು ರದ್ದುಗೊಳಿಸಲಾಗುತ್ತದೆ

• ರೈಲು ಸಂಖ್ಯೆ 66576 ತುಮಕೂರು – ಬಾಣಸವಾಡಿ ಮೆಮು ಸೇವೆಯನ್ನು ದಿನಾಂಕ 02.01.2026 ಮತ್ತು ದಿನಾಂಕ 03.01.2026 ರಂದು ರದ್ದುಗೊಳಿಸಲಾಗುತ್ತದೆ

• ರೈಲು ಸಂಖ್ಯೆ 66575 ಬಾಣಸವಾಡಿ – ತುಮಕೂರು ಮೆಮು ಸೇವೆಯನ್ನು ದಿನಾಂಕ 03.01.2026 ಮತ್ತು ದಿನಾಂಕ 05.01.2026 ರಂದು ರದ್ದುಗೊಳಿಸಲಾಗುತ್ತದೆ

• ರೈಲು ಸಂಖ್ಯೆ 66563 ಯಶವಂತಪುರ – ಹೊಸೂರು ಮೆಮು, ರೈಲು ಸಂಖ್ಯೆ 66564 ಹೊಸೂರು- ಯಶವಂತಪುರ ಮೆಮು, ರೈಲು ಸಂಖ್ಯೆ. 66585 ಯಶವಂತಪುರ – ಹೊಸೂರು ಮೆಮು, ರೈಲು ಸಂಖ್ಯೆ. 66586 ಹೊಸೂರು- ಯಶವಂತಪುರ ಮೆಮು, ರೈಲು ಸಂಖ್ಯೆ 66591 ಯಶವಂತಪುರ – ಹೊಸೂರು ಮೆಮು, ರೈಲು ಸಂಖ್ಯೆ 66593 ಯಶವಂತಪುರ – ಚಿಕ್ಕಬಳ್ಳಾಪುರ ಮೆಮು, ರೈಲು ಸಂಖ್ಯೆ 66592 ಹೊಸೂರು- ಯಶವಂತಪುರ ಮೆಮು, ರೈಲು ಸಂಖ್ಯೆ 66594 ಚಿಕ್ಕಬಳ್ಳಾಪುರ – ಯಶವಂತಪುರ ಮೆಮು, ರೈಲು ಸಂಖ್ಯೆ 66566 ತುಮಕೂರು – ಬಾಣಸವಾಡಿ ಮೆಮು ಸೇವೆಗಳನ್ನು ದಿನಾಂಕ 03.01.2026 ರಂದು ರದ್ದುಗೊಳಿಸಲಾಗುವುದು.

• ರೈಲು ಸಂಖ್ಯೆ 66565 ಬಾಣಸವಾಡಿ – ತುಮಕೂರು ಮೆಮು ಸೇವೆಯನ್ನು ದಿನಾಂಕ 05.01.2026 ರಂದು ರದ್ದುಗೊಳಿಸಲಾಗುವುದು

ರೈಲುಗಳ ಭಾಗಶಃ ರದ್ದತಿ:

• ದಿನಾಂಕ 02.01.2026 ರಂದು ಹೊರಡುವ ರೈಲು ಸಂಖ್ಯೆ.12889 ಟಾಟಾನಗರ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆಯನ್ನು ಕೃಷ್ಣರಾಜಪುರಂ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು. ಯಲಹಂಕ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಸತ್ಯ  ಸಾಯಿ ಪ್ರಶಾಂತಿ ನಿಲಯಮ್‌ ನಿಲ್ದಾಣದ ಮೂಲಕ ಸಂಚರಿಸುವುದು.

• ದಿನಾಂಕ 05.01.2026 ರಂದು ಹೊರಡುವ ರೈಲು ಸಂಖ್ಯೆ.12890 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಟಾಟಾನಗರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆಯನ್ನು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಕೃಷ್ಣರಾಜಪುರಂ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಅಂದು ಸತ್ಯ ಸಾಯಿ ಪ್ರಶಾಂತಿ ನಿಲಯ ನಿಲ್ದಾಣದಿಂದ ಬೆಳಿಗ್ಗೆ 4.45ಕ್ಕೆ ಹೊರಡಲಿದೆ.

• ದಿನಾಂಕ 02.01.2026ರಂದು ಹೊರಡುವ ರೈಲು ಸಂಖ್ಯೆ.12863 ಹೌರಾ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ಸೇವೆಯನ್ನು ಕೃಷ್ಣರಾಜಪುರಂ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ.12864 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಹೌರಾ ಎಕ್ಸ್‌ಪ್ರೆಸ್ ಸೇವೆಯನ್ನು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಅಂದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಬೆಳಿಗ್ಗೆ 10.15ಕ್ಕೆ  ಹೊರಡಲಿದೆ

• ದಿನಾಂಕ 03.01.2026 ಮತ್ತು ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ 06269 ಮೈಸೂರು – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಪ್ಯಾಸೆಂಜರ್ ಸೇವೆಯನ್ನು ಕೆಎಸ್‌ಆರ್ ಬೆಂಗಳೂರು ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು

• ದಿನಾಂಕ 04.01.2026 ಮತ್ತು ದಿನಾಂಕ 05.01.2026 ರಂದು ಹೊರಡುವ ರೈಲು ಸಂಖ್ಯೆ.16529 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಕಾರೈಕ್ಕಲ್ ಎಕ್ಸ್‌ಪ್ರೆಸ್ ಸೇವೆಯನ್ನು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಈ ದಿನಗಳಂದು ಬೆಳಿಗ್ಗೆ 7.30ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ನಿಲ್ದಾಣದಿಂದ ಹೊರಡಲಿದೆ.

• ದಿನಾಂಕ 01.01.2026 ಮತ್ತು ದಿನಾಂಕ 02.01.2026ರಂದು ಹೊರಡುವ ರೈಲು ಸಂಖ್ಯೆ.12296 ದಾನಾಪುರ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ಸೇವೆಯನ್ನು ಕೃಷ್ಣರಾಜಪುರಂ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

• ದಿನಾಂಕ 04.01.2026 ಮತ್ತು ದಿನಾಂಕ 05.01.2026 ರಂದು ಹೊರಡುವ ರೈಲು ಸಂಖ್ಯೆ.12295 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ದಾನಾಪುರ ಎಕ್ಸ್‌ಪ್ರೆಸ್ ಸೇವೆಯನ್ನು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೈಯ್ಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಈ ದಿನಗಳಂದು ಬೆಳಿಗ್ಗೆ 9.15 ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ.

• ದಿನಾಂಕ 03.01.2026 ರಂದು ಹೊರಡುವ ರೈಲು ಸಂಖ್ಯೆ.17236 ನಾಗರ್‌ಕೋಯಿಲ್ ಜಂಕ್ಷನ್ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ಸೇವೆಯನ್ನು ಬೈಯ್ಯಪ್ಪನಹಳ್ಳಿ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ.17209 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಕಾಕಿನಾಡ  ಎಕ್ಸ್‌ಪ್ರೆಸ್ ಸೇವೆಯನ್ನು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೈಯ್ಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಅಂದು ಬೆಳಿಗ್ಗೆ 11.20 ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ನಿಲ್ದಾಣದಿಂದ ಹೊರಡಲಿದೆ.

• ದಿನಾಂಕ 03.01.2026 ರಂದು ಹೊರಡುವ ರೈಲು ಸಂಖ್ಯೆ.17210 ಕಾಕಿನಾಡ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ಸೇವೆಯನ್ನು ಬೈಯ್ಯಪ್ಪನಹಳ್ಳಿ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ.17235 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ನಾಗರಕೋಯಿಲ್ ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೈಯ್ಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದ್ದು, ರೈಲು ಅಂದು ಸಂಜೆ 5.15 ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ನಿಲ್ದಾಣದಿಂದ ಹೊರಡಲಿದೆ.

• ದಿನಾಂಕ 03.01.2026 ರಂದು ಹೊರಡುವ ರೈಲು ಸಂಖ್ಯೆ.16319 ತಿರುವನಂತಪುರಂ ಉತ್ತರ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಬೈಯ್ಯಪ್ಪನಹಳ್ಳಿ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ.16320 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ತಿರುವನಂತಪುರಂ ಉತ್ತರ ಎಕ್ಸ್‌ಪ್ರೆಸ್ ರೈಲು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೈಯ್ಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದ್ದು ಬೆಂಗಳೂರು ಕಂಟೋನ್ಮೆಂಟ್‌ ನಿಂದ ಸಂಜೆ 7 ಗಂಟೆಗೆ ಹೊರಡಲಿದೆ.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ.22232 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಯಲಹಂಕ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದ್ದು, ರೈಲು ಅಂದು ಯಲಹಂಕ ನಿಲ್ದಾಣದಿಂದ ನಿಗದಿತ ನಿರ್ಗಮನ ಸಮಯಕ್ಕೆ ಹೊರಡಲಿದೆ.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ 22231 ಕಲಬುರಗಿ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಯಲಹಂಕ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

• ದಿನಾಂಕ 02.01.2026 ಮತ್ತು ದಿನಾಂಕ 03.01.2026 ರಂದು ಹೊರಡುವ ರೈಲು ಸಂಖ್ಯೆ 12245 ಹೌರಾ – ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಸೇವೆಯನ್ನು ವೈಟ್‌ಫೀಲ್ಡ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

• ದಿನಾಂಕ 04.01.2026 ಮತ್ತು ದಿನಾಂಕ 05.01.2026 ರಂದು ಹೊರಡುವ ರೈಲು ಸಂಖ್ಯೆ.12246 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಹೌರಾ ಎಕ್ಸ್‌ಪ್ರೆಸ್ ಸೇವೆಯನ್ನು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಅಂದು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಬದಲಿಗೆ ಯಶವಂತಪುರ ನಿಲ್ದಾಣದಿಂದ ಬೆಳಿಗ್ಗೆ 10.30 ಕ್ಕೆ ಹೊರಡಲಿದೆ.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ.22617 ತಿರುಪತಿ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆಯನ್ನು ಕೃಷ್ಣರಾಜಪುರಂ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

• ದಿನಾಂಕ 05.01.2026 ರಂದು ಹೊರಡುವ ರೈಲು ಸಂಖ್ಯೆ.22618 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ತಿರುಪತಿ ಎಕ್ಸ್‌ಪ್ರೆಸ್ ಸೇವೆಯನ್ನು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೈಯಪ್ಪನಹಳ್ಳಿ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಅಂದು ಬೆಳಿಗ್ಗೆ 7.30 ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ನಿಲ್ದಾಣದಿಂದ ಹೊರಡಲಿದೆ.

• ದಿನಾಂಕ 03.01.2026 ಮತ್ತು ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ.16530 ಕಾರೈಕ್ಕಲ್ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ಸೇವೆಯನ್ನು ಬೈಯಪ್ಪನಹಳ್ಳಿ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

• ದಿನಾಂಕ 03.01.2026 ಮತ್ತು ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ.06270 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮೈಸೂರು ಪ್ಯಾಸೆಂಜರ್ ಸೇವೆಯನ್ನು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಅಂದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ನಿಗದಿತ ನಿರ್ಗಮನ ಸಮಯಕ್ಕೆ ಹೊರಡಲಿದೆ.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ.22354 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಪಾಟ್ನಾ ಜಂಕ್ಷನ್ ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೈಯ್ಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದ್ದು, ರೈಲು ಅಂದು ಮಧ್ಯಾಹ್ನ 1.50 ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ನಿಲ್ದಾಣದಿಂದ ಹೊರಡಲಿದೆ.

• ದಿನಾಂಕ 03.01.2026 ರಂದು ಹೊರಡುವ ರೈಲು ಸಂಖ್ಯೆ 16586 ಮುರ್ಡೇಶ್ವರ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರು ಮತ್ತು ಎಸ್‌ಎಂವಿಟಿ  ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ 16511 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್ ರೈಲು ಎಸ್‌ಎಂವಿಟಿ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದ್ದು, ಯಶವಂತಪುರ ನಿಲ್ದಾಣದಿಂದ ನಿಗದಿತ ಸಮಯಕ್ಕೆ ಹೊರಡಲಿದೆ.

• ದಿನಾಂಕ 03.01.2026 ರಂದು ಹೊರಡುವ ರೈಲು ಸಂಖ್ಯೆ 16512 ಕಣ್ಣೂರು – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಯಶವಂತಪುರ ಮತ್ತು ಎಸ್‌ಎಂವಿಟಿ ಬೆಂಗಳೂರು  ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ 16585 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮುರ್ಡೇಶ್ವರ ಎಕ್ಸ್‌ಪ್ರೆಸ್ ಸೇವೆಯನ್ನು ಎಸ್‌ಎಂವಿಟಿ ಬೆಂಗಳೂರು ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ನಿಗದಿತ ನಿರ್ಗಮನ ಸಮಯಕ್ಕೆ ಹೊರಡಲಿದೆ.

• ದಿನಾಂಕ 02.01.2026 ರಂದು ಹೊರಡುವ ರೈಲು ಸಂಖ್ಯೆ 11086 ಗ್ವಾಲಿಯರ್ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ಸೇವೆಯನ್ನು ಯಲಹಂಕ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ 11085 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು – ಗ್ವಾಲಿಯರ್ ಎಕ್ಸ್‌ಪ್ರೆಸ್ ಸೇವೆಯನ್ನು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಯಲಹಂಕ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಅಂದು ಮಧ್ಯಾಹ್ನ 3.50 ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಡಲಿದೆ.

• ದಿನಾಂಕ 03.01.2026 ಮತ್ತು ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ 16378 ಎರ್ನಾಕುಲಂ ಜಂಕ್ಷನ್ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಬೈಯ್ಯಪ್ಪನಹಳ್ಳಿ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದ್ದು, ಬೈಯ್ಯಪ್ಪನಹಳ್ಳಿ ನಿಲ್ದಾಣದಲ್ಲಿ ಸಂಚಾರ ಕೊನೆಗೊಳ್ಳಲಿದೆ.

• ದಿನಾಂಕ 04.01.2026 ಮತ್ತು ದಿನಾಂಕ 05.01.2026 ರಂದು ಹೊರಡುವ ರೈಲು ಸಂಖ್ಯೆ.16377 ಎರ್ನಾಕುಲಂ ಜಂಕ್ಷನ್ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೈಯ್ಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದ್ದು, ರೈಲು ಬೆಂಗಳೂರು ಕಂಟೋನ್ಮೆಂಟ್‌ ನಿಲ್ದಾಣದಿಂದ ಬೆಳಿಗ್ಗೆ 6.20 ಕ್ಕೆ ಹೊರಡಲಿದೆ.

• ದಿನಾಂಕ 03.01.2026 ರಂದು ಹೊರಡುವ ರೈಲು ಸಂಖ್ಯೆ.20687 ಎಸ್‌ಎಸ್‌ಎಸ್ ಹುಬ್ಬಳ್ಳಿ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಸೇವೆಯನ್ನು ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಸಂಚಾರವು ಯಶವಂತಪುರ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ.20688 ಕೆಎಸ್‌ಆರ್ ಬೆಂಗಳೂರು – ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ಸೇವೆಯನ್ನು ಕೆಎಸ್‌ಆರ್ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಅಂದು ಯಶವಂತಪುರ ನಿಲ್ದಾಣದಿಂದ ನಿಗದಿತ ನಿರ್ಗಮನದ ಸಮಯಕ್ಕೆ ಹೊರಡಲಿದೆ.

• ದಿನಾಂಕ 03.01.2026 ರಂದು ಹೊರಡುವ ರೈಲು ಸಂಖ್ಯೆ 06540 ಬೀದರ್ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ಸೇವೆಯನ್ನು ಯಲಹಂಕ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು, ಮತ್ತು ರೈಲು ಸಂಚಾರವು ಯಲಹಂಕ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ 06539 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಬೀದರ್ ಎಕ್ಸ್‌ಪ್ರೆಸ್ ಸೇವೆಯನ್ನು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಯಲಹಂಕ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಅಂದು ಎಸ್‌.ಎಂ.ವಿ.ಟಿ. ಬೆಂಗಳೂರು ನಿಲ್ದಾಣಕ್ಕೆ ಬದಲಾಗಿ  ಯಲಹಂಕ ನಿಲ್ದಾಣದಿಂದ ನಿಗದಿತ ನಿರ್ಗಮನ ಸಮಯಕ್ಕೆ ಹೊರಡಲಿದೆ.

• ದಿನಾಂಕ 04.11.2026 ರಂದು ಹೊರಡುವ ರೈಲು ಸಂಖ್ಯೆ 56520 ಹೊಸಪೇಟೆ – ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ ಸೇವೆಯನ್ನು ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.

• ದಿನಾಂಕ 05.11.2026 ರಂದು ಹೊರಡುವ ರೈಲು ಸಂಖ್ಯೆ.17391 ಕೆಎಸ್ಆರ್ ಬೆಂಗಳೂರು – ಸಿಂಧನೂರು ಎಕ್ಸ್‌ಪ್ರೆಸ್ ಸೇವೆಯನ್ನು ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಯಶವಂತಪುರ ನಿಲ್ದಾಣದಿಂದ ನಿಗದಿತ ನಿರ್ಗಮನ ಸಮಯಕ್ಕೆ ಹೊರಡಲಿದೆ.

• ದಿನಾಂಕ 02.01.2026 ರಂದು ಹೊರಡುವ ರೈಲು ಸಂಖ್ಯೆ 22306 ಜಸಿಡೀಹ್‌ ಜಂಕ್ಷನ್ – ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಸೇವೆಯನ್ನು ವೈಟ್‌ಫೀಲ್ಡ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ 22305 ಎಸ್‌ಎಂವಿಟಿ ಬೆಂಗಳೂರು – ಜಸಿಡೀಹ್‌ ಜಂಕ್ಷನ್ ಎಕ್ಸ್‌ಪ್ರೆಸ್ ಸೇವೆಯನ್ನು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ವೈಟ್‌ಫೀಲ್ಡ್  ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ರೈಲು ಅಂದು ಬೆಳಿಗ್ಗೆ 10.30 ಕ್ಕೆ ವೈಟ್‌ಫೀಲ್ಡ್‌ ನಿಲ್ದಾಣದಿಂದ ಹೊರಡಲಿದೆ.

ರೈಲುಗಳ ಮಾರ್ಗ ಬದಲಾವಣೆ:

• ದಿನಾಂಕ 03.01.2026 ರಂದು ಹೊರಡುವ ರೈಲು ಸಂಖ್ಯೆ 11021 ದಾದರ್ – ತಿರುನಲ್ವೇಲಿ ಎಕ್ಸ್‌ಪ್ರೆಸ್  ಚಿಕ್ಕಬಾಣಾವರ, ಬಾಣಸವಾಡಿ, ಬೈಯ್ಯಪ್ಪನಹಳ್ಳಿ ಕ್ಯಾಬಿನ್ ಮತ್ತು ಹೊಸೂರು ನಿಲ್ದಾಣಗಳ ಮೂಲಕ ಸಂಚರಿಸಲಿದ್ದು ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ 16565 ಯಶವಂತಪುರ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್  ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಯಲಹಂಕ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳ ಮೂಲಕ ಸಂಚರಿಸಲಿದ್ದು  ಬಾಣಸವಾಡಿ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.

• ದಿನಾಂಕ 04.01.2026 ರಂದು ಹೊರಡುವ ರೈಲು ಸಂಖ್ಯೆ 07313 ಎಸ್‌ಎಸ್‌ಎಸ್ ಹುಬ್ಬಳ್ಳಿ – ಕೊಲ್ಲಂ ಎಕ್ಸ್‌ಪ್ರೆಸ್  ತುಮಕೂರು, ಚಿಕ್ಕಬಾಣಾವರ, ಲೊಟ್ಟೆಗೊಲ್ಲಹಳ್ಳಿ, ಯಲಹಂಕ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳ ಮೂಲಕ ಸಂಚರಿಸಲಿದ್ದು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.

ರೈಲುಗಳ ಸಮಯ ಬದಲಾವಣೆ:

• ದಿನಾಂಕ 02.01.2026 ರಂದು ಹೊರಡುವ ರೈಲು ಸಂಖ್ಯೆ 22351 ಸಹಾರ್ಸ ಜಂ. – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ 10 ಗಂಟೆ ತಡವಾಗಿ ಸಂಚಾರ ಆರಂಭಿಸಲಿದೆ.

ರೈಲುಗಳ ನಿಯಂತ್ರಣ:

• ದಿನಾಂಕ 03.01.2026 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 18637 ಹಟಿಯಾ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ಅನ್ನು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.

• ದಿನಾಂಕ 04.01.2026 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 12683 ಎರ್ನಾಕುಲಂ ಜಂಕ್ಷನ್ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ಪ್ರಯಾಣವನ್ನು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.

ನಿಲುಗಡೆ ರದ್ದು:

• ದಿನಾಂಕ 03.01.2026 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 22697 ಎಸ್‌ಎಸ್‌ಎಸ್ ಹುಬ್ಬಳ್ಳಿ – ಪುರಚ್ಚಿ ತಲೈವರ್ ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿಗೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.

• ದಿನಾಂಕ 04.01.2026 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 22698 ಪುರಚ್ಚಿ ತಲೈವರ್ ಎಂಜಿಆರ್ ಚೆನ್ನೈ ಸೆಂಟ್ರಲ್ – ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲಿಗೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.

 


Share this with Friends

Related Post