Wed. Apr 2nd, 2025

ಊಟಕ್ಕೆ ಹಾಕದ ತಾಯಿಯನ್ನೇ ಹೊಡೆದು ಕೊಂದ ಮಗ

Murder
Share this with Friends

ಬೆಂಗಳೂರು : ಊಟ ಹಾಕಲ್ಲ ವೆಂದು ತಾಯಿಯು ಬೈದಿದ್ದಕ್ಕೆ 18 ವರ್ಷದ ಮಗನೊಬ್ಬ ಹೆತ್ತ ತಾಯಿಯನ್ನೇ ರಾಡ್ ನಿಂದ ಹೊಡೆದು ಕೊಂದು ಠಾಣೆಗೆ ಶರಣಾದ ಘಟನೆ ಬೆಂಗಳೂರಿನ ಕೆಆರ್ ಪುರಂನ ಭೀಮಯ್ಯ ಲೇಔಟ್ ನಲ್ಲಿ ನಡೆದಿದೆ. ತಾಯಿ ನೇತ್ರ (40) ಕೊಲೆಗೆ ಈಡಾಗಿರುವ ದುರ್ದೈವಿ.

ಇಂದು ಬೆಳಿಗ್ಗೆ 7 ಗಂಟೆಗೆ ಮಗನು ಕಾಲೇಜಿಗೆ ಹೋಗಲು ತಯಾರಾದಾಗ, ತನ್ನ ತಾಯಿಗೆ ಊಟ ಬಡಿಸು ಎಂದು ಕೇಳಿಕೊಂಡಾಗ ತಾಯಿ ಕೋಪದಲ್ಲಿ ನೀನು ನನ್ನ ಮಗನೆ ಅಲ್ಲ ಊಟ ಹಾಕಲ್ಲವೆಂದು ಬೈದಿದ್ದಾಳೆ .ಈ ವೇಳೆ ಕ್ರೋದಗೊಂಡ ಮಗ ಅಲ್ಲಿಯೇ ಇದ್ದ ರಾಡ್ ನಿಂದ ಬಲವಾಗಿ ತಾಯಿಗೆ ಹೊಡೆದಿದ್ದಾನೆ. ತಾಯಿ ಸಾವನಪ್ಪಿದಿರುವ ಕುರಿತು ಖಚಿತವಾದ ಮೇಲೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಕೆ ಆರ್ ಪುರಂ ಠಾಣೆ ಪೊಲೀಸ್ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಿಎಫ್ಐ ಕಾರ್ಯಕರ್ತರಿಗೆ ಮರಣದಂಡನೆ ವಿಧಿಸಿದ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ


Share this with Friends

Related Post