Fri. Mar 6th, 2026

ಹೊಸ ವರ್ಷಕ್ಕೆ ನೈರುತ್ಯ ರೈಲ್ವೆ ವೇಳಾಪಟ್ಟಿ ಬದಲಾವಣೆ: ಪರಿಷ್ಕೃತ ವೇಳಾಪಟ್ಟಿ ಮಾಹಿತಿ ಇಲ್ಲಿದೆ..!

Share this with Friends

ಬೆಂಗಳೂರು: ಹೊಸ ವರ್ಷದಿಂದ ನೈಋತ್ಯ ರೈಲ್ವೆ ವಲಯದ ರೈಲುಗಳ ವೇಳಾಪಟ್ಟಿ ಬದಲಾಗಲಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪರಿಷ್ಕೃತ ರೈಲ್ವೆ ವೇಳಾಪಟ್ಟಿ ಪಡೆಯುವ ಅವಕಾಶವನ್ನು ನೈಋತ್ಯ ರೈಲ್ವೆ ಕಲ್ಪಿಸಿದೆ. ಪ್ರಯಾಣಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದೆ.

ನೈಋತ್ಯ ರೈಲ್ವೆಯು ಸಾರ್ವಜನಿಕ ವೇಳಾಪಟ್ಟಿ–22ನ್ನು ಪ್ರಕಟಿಸಿದ್ದು, ಇದು 2026ರ ಜನವರಿ 1, ರಿಂದ ಜಾರಿಗೆ ಬರಲಿದೆ. ಪರಿಷ್ಕೃತ ರೈಲು ವೇಳಾಪಟ್ಟಿಯನ್ನು SWR ವೆಬ್’ಸೈಟ್ ನಲ್ಲಿ  PDF ಸ್ವರೂಪದಲ್ಲಿ ಅಪ್ ಲೋಡ್ ಮಾಡಲಾಗಿದೆ. ಪಿಡಿಎಫ್ ಗಾಗಿ ಈ ಕೆಳಗಿನ ಲಿಂಕ್ ಬಳಸಬಹುದಾಗಿದೆ.

(https://swr.indianrailways.gov.in/view_section.jsp?fontColor=black&backgroundColor=LIGHTSTEELBLUE&lang=0&id=0,1,808,818,847,1880)

ಅಥವಾ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡುವ ಮೂಲಕ ಮಾಹಿತಿ ಪಡೆಯಬಹುದು.ಪರ್ಯಾಯವಾಗಿ, ಪ್ರಯಾಣಿಕರು 139 ಅನ್ನು ಡಯಲ್ ಮಾಡುವ ಮೂಲಕ ಅಥವಾ ಅಧಿಕೃತ ವೆಬ್ ಸೈಟ್’ಗೆ ಭೇಟಿ ನೀಡುವ ಮೂಲಕ ವಿವರವಾದ ರೈಲು ಸಮಯಗಳನ್ನು ಪಡೆಯಬಹುದು.ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಉತ್ತಮ ಸಂಪರ್ಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಈ ಪರಿಷ್ಕರಣೆ ಮಾಡಲಾಗಿದೆ.


Share this with Friends

Related Post