Tue. Dec 24th, 2024

ಜನಾಕರ್ಷಿಸುತ್ತಿವೆ ವಿಶೇಷ ಮತಗಟ್ಟೆಗಳು

Share this with Friends

ಮೈಸೂರು ಏ.25: ಯುವ, ಸಖಿ, ವಿಶೇಷಚೇತನ, ಮಾದರಿ ಹಾಗೂ ವಿಷಯದಾರಿತ ಮತಗಟ್ಟೆಗಳು ವಿಶೇಷವಾಗಿದ್ದು ಜನಾಕರ್ಷಣೆಯಾಗಿವೆ.

ಜಿಲ್ಲಾ ಸ್ವೀಪ್ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ 2915 ಮತಗಟ್ಟೆಗಳ ಪೈಕಿ 99 ಮತಗಟ್ಟೆಗಳು ಈ ಬಾರಿ ನಾನಾ ರೀತಿಯಲ್ಲಿ ಕಂಗೊಳಿಸುತ್ತಿವೆ.

55 ಸಖಿ ಬೂತ್, 11 ವಿಶೇಷಚೇತನರ ಮತಗಟ್ಟೆ,11 ಯುವ ಮತಗಟ್ಟೆ,12 ಸಾಂಪ್ರಾದಾಯಿಕ ಮತಗಟ್ಟೆ ಮತ್ತು 10 ಮಾದರಿ ಮತಗಟ್ಟೆಗಳನ್ನು ರೂಪಿಸಲಾಗಿದೆ.

ಒಂದೊಂದು ಮತಗಟ್ಟೆಯನ್ನೂ ಆಕರ್ಷಕ ರೀತಿಯಲ್ಲಿ ರೂಪಿಸಲಾಗಿದೆ,ಮಹಿಳಾ ಮತದಾರರ ಸಂಖ್ಯೆ ಹೆಚ್ಚು ಇರುವ ಕಡೆ‌ ಸಖಿ ಮತಗಟ್ಟೆಗಳನ್ನು‌ ಸ್ಥಾಪಿಸಲಾಗಿದೆ.

ವಿಶೇಷಚೇತನರು ಸಹ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಚುನಾವಣಾ ಆಯೋಗ ರಾಂಪ್ ವ್ಯವಸ್ಥೆ, ವೀಲ್ ಚೇರ್, ಸಹಾಯಕರ ನಿಯೋಜನೆ, ಅಂಧ ಮತದಾರರಿಗೆ ಬೃೈಲ್ ಲಿಪಿಯಲ್ಲಿ ಸಿದ್ದಪಡಿಸಿರುವ ಮಾದರಿ ಮತಪತ್ರದ ಪ್ರದರ್ಶನ ಹಾಗೂ ಅದರ ವಿವರಣೆಯ ಆಡಿಯೋ ಕೂಡಾ ಲಭ್ಯವಿದೆ.

ವಿಶೇಷಚೇತನರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ 11 ಕ್ಷೇತ್ರಗಳಲ್ಲಿ 11 ವಿಶೇಷಚೇತನ ಸ್ನೇಹಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ವಿವಿಧ ಬಣ್ಣಗಳಿಂದ ಅವರಿಗೆ ತಿಳಿಯುವಂತೆ ವೀಲ್ ಚೇರ್, ಸನ್ನೆಯ ಚಿತ್ತಾರ ಹಾಗೂ ಮತದಾನ ಮಾಡುವ ಚಿತ್ರಗಳನ್ನು ಬರೆದು ಮತಗಟ್ಟೆಯನ್ನು ಅಲಂಕರಿಸಲಾಗಿದೆ.

ಗಿರಿಜನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಮತಗಟ್ಟೆಗಳನ್ನು ಸ್ಥಾಪಿಸಿ ಈ ಮತಗಟ್ಟೆಗಳನ್ನು ಸ್ಥಳೀಯರು ಬಳಕೆ ಮಾಡುವ ಸಾಮಗ್ರಿಗಳು ಹಾಗೂ ಪ್ರಾಕೃತಿಕವಾಗಿ ದೊರೆಯುವ ವಸ್ತುಗಳನ್ನು ಬಳಕೆ ಮಾಡಿ ಮತಗಟ್ಟೆಗಳನ್ನು ಸ್ಥಳೀಯರ ಸಂಪ್ರಾದಾಯ ಹಾಗೂ ಆಚರಣೆಗಳನ್ನು ಪ್ರತಿಬಿಂಬಿಸುವ ಪ್ರತಿಕೃತಿಗಳೊಂದಿಗೆ ಚಿತ್ತಾಕರ್ಷಕವಾಗಿ ಮನಸೆಳೆಯುವಂತೆ ಸಿಂಗರಿಸಲಾಗಿದೆ.

ಸಖಿ ಮತಗಟ್ಟೆಗಳು ಗುಲಾಬಿ ಬಣ್ಣದಲ್ಲಿ ಪ್ರಕೃತಿಯೊಂದಿಗೆ ಮಹಿಳೆಯ ಚಿತ್ರ ಬಿಡಿಸುವ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಮಾತ್ರವಲ್ಲದೇ ಮತದಾನದ ದಿನ ಸಖಿ ಮತಗಟ್ಟೆಯಲ್ಲಿ ಮಹಿಳಾ ಚುನಾವಣಾಧಿಕಾರಿಗಳೇ ಕಾರ್ಯನಿರ್ವಹಿಸುವುದು ವಿಶೇಷವಾಗಿದೆ.


Share this with Friends

Related Post