Mon. Dec 23rd, 2024

ಶ್ರೀಕೃಷ್ಣ ರಾಜೇಂದ್ರ ಸಹಕಾರಿ ಬ್ಯಾಂಕ್ ನಿಂದ101 ಗಣಪತಿಗೆ ವಿಶೇಷ ಪೂಜೆ

Share this with Friends

ಮೈಸೂರು: ಅಗ್ರಹಾರ ವೃತ್ತದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕರ ಚುನಾವಣೆ ಅಕ್ಟೋಬರ್ 20ರಂದು ನಡೆಯಲಿದ್ದು,ಪ್ರಚಾರ ಕಾರ್ಯ ಕೈಗೊಳ್ಳಲು 101 ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಅ.20‌ ರಂದು ಜೆ ಎಲ್ ಬಿ ರಸ್ತೆಯಲ್ಲಿರುವ ಹಾರ್ಡ್ವಿಕ್ ಪ್ರೌಢಶಾಲೆಯಲ್ಲಿ ಚುನಾವಣೆ ನಡೆಯಲಿದ್ದು ನಿರ್ದೇಶಕರ ತಂಡ 101 ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರದ ಕರಪತ್ರ ಬಿಡುಗಡೆಗೊಳಿಸಿದರು.

ಸಾಮಾನ್ಯ ವರ್ಗದ ಅಭ್ಯರ್ಥಿಗಳಾದ ಹಾಲಿ ಅಧ್ಯಕ್ಷ ಪ್ರತಿದ್ವನಿ ಪ್ರಸಾದ್, ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಮಾಜಿ ಅಧ್ಯಕ್ಷ ನo ಸಿದ್ದಪ್ಪ, ಎಂ. ಡಿ ಪಾರ್ಥಸಾರಥಿ, ಎಚ್. ವಿ ಭಾಸ್ಕರ್, ಟಿ. ವಿ ಗಣೇಶ್ ಮೂರ್ತಿ ತಾಯೂರು, ಜಿ ಎಂ ಪಂಚಾಕ್ಷರಿ, ಮಹಿಳಾ ಮೀಸಲು ಎಚ್ ಎನ್ ಸರ್ವಮಂಗಳ, ಬಿ ನಾಗಜೋತಿ ಪ್ರತಿಧ್ವನಿ ಪ್ರಸಾದ್, ಹಿಂದುಳಿದ ವರ್ಗದ ಪವರ್ಗ. ಬಿ ಮೀಸಲಿಂದ ಅರುಣ್ ಸಿದ್ದಪ್ಪ, ಹಿಂದುಳಿದ ಪವರ್ಗ- ಎ ನವೀನ್ ಕುಮಾರ್, ಪರಿಶಿಷ್ಟ ಪಂಗಡ ಶಿವಪ್ರಕಾಶ್ ಎಂ ಅವರು ಹಾಜರಿದ್ದರು.


Share this with Friends

Related Post