Mon. Dec 23rd, 2024

ಕಾಂಗ್ರೆಸ್ ಸರ್ಕಾರ ಬರಲೆಂದು ಹಾರೈಸಿ‌ 101 ಗಣಪತಿ ದೇವಸ್ಥಾನದಲ್ಲಿ ಪೂಜೆ

Share this with Friends

ಮೈಸೂರು,ಜೂನ್.1: ಮೈಸೂರಿನ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ಸ್ನೇಹ ಬಳಗದ ಸದಸ್ಯರು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಕ್ಕೆ ಬರಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.

ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಅವರ ತವರೂರು ಮೈಸೂರು ಕೊಡುಗು ಅಭ್ಯರ್ಥಿ ಎಂ ಲಕ್ಷ್ಮಣ್ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ಬೋಸ್ ಸೇರಿದಂತೆ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್ ಗೆಲುವು ಸಾಧಿಸಲೆಂದು ಪ್ರಾರ್ಥಿಸಿದರು.

ಭವಿಷ್ಯದ ಭಾರತಕ್ಕೆ ಈ ಬಾರಿಯ ಲೋಕಸಭಾ ಚುನಾವಣೆ ಅತ್ಯಂತ ನಿರ್ಣಾಯಕ, ಇದು ಸುಳ್ಳು ಮತ್ತು ಸತ್ಯ, ನ್ಯಾಯ ಹಾಗೂ ಅನ್ಯಾಯ ನಡುವಿನ ಧರ್ಮಯುದ್ಧ, ಯಾವತ್ತು ಧರ್ಮಕ್ಕೆ ವಿಜಯ, ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ರಚನೆ ಖಚಿತ ಎಂದು ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಮಾತನಾಡಿ,ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶವೇ ನಮ್ಮ ಸಾಧನೆಗೆ ಸಾಕ್ಷಿ, ಅಭಿವೃದ್ಧಿ ಪರ ಸಾಧನೆ ಹಾಗೂ ಜನಪರ ಗ್ಯಾರಂಟಿಗಳ ಬಲದಿಂದ
20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ, ಎಂದು ತಿಳಿಸಿದರು.

ಜಿ ರಾಘವೇಂದ್ರ, ವರುಣ ಮಹಾದೇವ್, ಮಹದೇವ್ ಪಾಂಡೆ, ರವಿಚಂದ್ರ, ಹರೀಶ್ ಕುಮಾರ್, ಮಹಾದೇವ್, ಕಡಕೋಳ ಶಿವಲಿಂಗ, ಹರೀಶ್ ನಾಯ್ಡು, ಎಸ್ ಎನ್ ರಾಜೇಶ್, ಲೋಕೇಶ್, ನವೀನ್ ಕೆಂಪಿ, ರಾಜೇಶ್ ಪಳನಿ ಮತ್ತಿತರರು ಪೂಜೆಯಲ್ಲಿ ಭಾಗವಹಿಸಿದ್ದರು.


Share this with Friends

Related Post