Sat. Dec 28th, 2024

ಆಂಜನೇಯಸ್ವಾಮಿಗೆ ವಿಶೇಷ‌ ಪೂಜೆ

Share this with Friends

ಮೈಸೂರು, ಏ.17: ನಾಡಿನಾದ್ಯಂತ ಇಂದು ಶ್ರೀ ರಾಮನವಮಿ ಹಬ್ಬ ವನ್ನು ಭಕ್ತಿಯಿಂದ ಆಚರಿಸಲಾಗಿದೆ.

ಮೈಸೂರಿನ ಅಗ್ರಹಾರ ವೃತ್ತದ ಸಮೀಪ ಕೆಆರ್ ಪೊಲೀಸ್ ಸ್ಟೇಷನ್ ಪಕ್ಕದಲ್ಲಿರುವ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿರುವ ಆಂಜನೇಯ ಸ್ವಾಮಿ ಮೂರ್ತಿಗೆ ಇಂದು ವಿಶೇಷ ಅಭಿಷೇಕ ನೆರವೇರಿಸಲಾಯಿತು.

ನಂತರ ಪೂಜೆ ನೆರವೇರಿಸಿ ಹೂವಿನ ಅಲಂಕಾರ ಮಾಡಿ ನೈವೇದ್ಯ ಅರ್ಪಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಆಂಜನೇಯಸ್ವಾಮಿಯ ಹೃದಯ ಭಾಗದಲ್ಲಿ ಶ್ರೀರಾಮ ಸೀತಾಮಾತಾ ಇರುವ ಫೋಟೊ ಇಟ್ಟು ಅಲಂಕರಿಸಿದ್ದು ಭಕ್ತರ ಗಮನ ಸೆಳೆಯಿತು.


Share this with Friends

Related Post