Fri. Mar 6th, 2026

ರೈಲ್ವೆ ಪ್ರಯಾಣಿಕರೆ ಗಮನಿಸಿ: ಮಾಲ್ಡಾ ಟೌನ್,ಧನವಾದ್,ಋಷಿಕೇಶ್ ಗೆ ಇದೆ ವಿಶೇಷ ರೈಲು 

Share this with Friends

ಬೆಂಗಳೂರು: ಸಧ್ಯದಲ್ಲೇ ಬರಲಿರುವ ಹೋಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಹೊರ ಹೋಗುವ ಪ್ರಯಾಣಿಕರಿಗೆ ಎಸ್‌.ಎಂ.ವಿ.ಟಿ. ಬೆಂಗಳೂರು-ಮಾಲ್ಡಾ ಟೌನ್‌,  ಯಶವಂತಪುರ- ಧನಬಾದ್‌ ಮತ್ತು ಯಶವಂತಪುರ- ಯೋಗ ನಗರಿ ಋಷಿಕೇಶ್‌ ವಿಶೇಷ ಎಕ್ಸ್‌ ಪ್ರೆಸ್‌ ರೈಲು ಸೇವೆ ಕಲ್ಪಿಸಲಾಗಿದೆ.

ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆಯು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಪ್ರಯಾಣಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ನೈಋತ್ಯ ರೈಲ್ವೆ ಮನವಿ ಮಾಡಿದೆ.

ವಿಶೇಷ ರೈಲು:

1. ರೈಲು ಸಂಖ್ಯೆ 06565/06566 ಎಸ್‌.ಎಂ.ವಿ.ಟಿ. ಬೆಂಗಳೂರು – ಮಾಲ್ಡಾ ಟೌನ್ – ಎಸ್‌.ಎಂ.ವಿ.ಟಿ.  ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್

     (i) ರೈಲು ಸಂಖ್ಯೆ 06565 ಎಸ್‌.ಎಂ.ವಿ.ಟಿ. ಬೆಂಗಳೂರು – ಮಾಲ್ಡಾ ಟೌನ್ ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 22.02.2026, 01.03.2026 ಮತ್ತು 08.03.2026 (ಭಾನುವಾರ) ರಂದು ರಾತ್ರಿ 11.40 ಕ್ಕೆ ಎಸ್‌.ಎಂ.ವಿ.ಟಿ.  ಬೆಂಗಳೂರು ನಿಲ್ದಾಣದಿಂದ ಹೊರಟು 3 ನೇ ದಿನ (ಮಂಗಳವಾರ) ಸಂಜೆ 4.30 ಕ್ಕೆ ಮಾಲ್ಡಾ ಟೌನ್ ನಿಲ್ದಾಣವನ್ನು ತಲುಪಲಿದೆ.

(ii) ರೈಲು ಸಂಖ್ಯೆ 06566 ಮಾಲ್ಡಾ ಟೌನ್ – ಎಸ್‌.ಎಂ.ವಿ.ಟಿ.  ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 25.02.2026, 04.03.2026 ಮತ್ತು 11.03.2026 ರಂದು (ಬುಧವಾರ) ಸಂಜೆ 4 ಗಂಟೆಗೆ ಮಾಲ್ಡಾ ಟೌನ್‌ ನಿಲ್ದಾಣದಿಂದ ಹೊರಟು 3ನೇ ದಿನದಂದು (ಶುಕ್ರವಾರ) ಮಧ್ಯಾಹ್ನ 12.45ಕ್ಕೆ ಎಸ್‌.ಎಂ.ವಿ.ಟಿ.  ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.

ಮಾರ್ಗದಲ್ಲಿ ಈ ರೈಲುಗಳಿಗೆ ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರಪೇಟೆ, ಕಾಟ್ಪಾಡಿ, ರೇಣಿಗುಂಟಾ, ಗೂಡೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ್, ಬಾಲುಗಾಂವ್, ಖುರ್ದಾ ರೋಡ್, ಭುವನೇಶ್ವರ್, ಕಟಕ್,  ಭದ್ರಕ್, ಬಾಲಸೋರ್, ಖರಗ್ಪುರ್, ಆಂದುಲ್, ಡಂಕುನಿ, ಬರ್ಧಮಾನ್, ಬೋಲ್ಪುರ್  ಶಾಂತಿನಿಕೇತನ, ರಾಂಪುರ್ ಹಾಟ್ ಮತ್ತು ನ್ಯೂ ಫರಕ್ಕಾ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಈ ವಿಶೇಷ ರೈಲು 20 ಬೋಗಿಗಳನ್ನು ಒಳಗೊಂಡಿದ್ದು, 1 ಫಸ್ಟ್ ಎಸಿ ಕಮ್ ಎಸಿ 2-ಟೈರ್ ಕೋಚ್, 2 ಎಸಿ 2-ಟೈರ್ ಕೋಚ್‌ಗಳು, 2 ಎಸಿ 3-ಟೈರ್ ಕೋಚ್‌ಗಳು, 9 ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್‌ಗಳು, 4 ಜನರಲ್ ಸೆಕೆಂಡ್ ಕ್ಲಾಸ್ ಕೋಚ್‌ಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್ (ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್‌ನೊಂದಿಗೆ) ಗಳನ್ನು ಹೊಂದಿರುತ್ತದೆ.

2. ರೈಲು ಸಂಖ್ಯೆ 06563/06564 ಯಶವಂತಪುರ – ಧನಬಾದ್- ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್

(i) ರೈಲು ಸಂಖ್ಯೆ 06563 ಯಶವಂತಪುರ- ಧನಬಾದ್ ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 21.02.2026, 28.02.2026 07.03.2026, 14.03.2026, 21.03.2026, 28.03.2026, 04.04.2026, 11.04.2026, 18.04.2026 ಮತ್ತು 25.04.2026 ರಂದು (ಶನಿವಾರ) ಬೆಳಿಗ್ಗೆ 7.30 ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು ಮೂರನೇ ದಿನ (ಸೋಮವಾರ) ಬೆಳಿಗ್ಗೆ 10.15 ಕ್ಕೆ ಧನಬಾದ್ ನಿಲ್ದಾಣವನ್ನು ತಲುಪಲಿದೆ.

(ii) ರೈಲು ಸಂಖ್ಯೆ 06564 ಧನಬಾದ್ – ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 23.02.2026, 02.03.2026, 09.03.2026, 16.03.2026, 23.03.2026, 30.03.2026, 06.04.2026, 13.04.2026, 20.04.2026 ಮತ್ತು 27.04.2026 (ಸೋಮವಾರ) ರಂದು ರಾತ್ರಿ 8.45 ಕ್ಕೆ ಧನಬಾದ್‌ ನಿಲ್ದಾಣದಿಂದ ಹೊರಟು ಮೂರನೇ ದಿನ (ಬುಧವಾರ) ರಾತ್ರಿ 9.30 ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.

ಮಾರ್ಗದಲ್ಲಿ ಈ ರೈಲುಗಳಿಗೆ ಯಲಹಂಕ, ಧರ್ಮಾವರಂ, ಅನಂತಪುರ, ಗೂಟಿ, ಧೋಣ್, ಕರ್ನೂಲ್ ಸಿಟಿ, ಮಹಬೂಬ್‌ನಗರ, ಕಾಚಿಗುಡ, ಕಾಜಿಪೇಟ್, ರಾಮಗುಂಡಂ, ಬಲ್ಹಾರ್ಶಾ, ನಾಗ್ಪುರ, ಇಟಾರ್ಸಿ, ಪಿಪರಿಯಾ, ನರಸಿಂಗ್‌ಪುರ, ಮದನ್ ಮಹಲ್, ಕಟ್ನಿ, ಸತ್ನಾ, ಪ್ರಯಾಗ್‌ರಾಜ್‌ ಛಿವಕಿ, ಮಿರ್ಜ಼ಾಪುರ್, ಪಂ. ದೀನ್ ದಯಾಳ್ ಉಪಾಧ್ಯಾಯ ಜಂ., ಭಬುವಾ ರೋಡ್, ಸಸಾರಾಮ್, ಅನುಗ್ರಹ ನಾರಾಯಣ ರೋಡ್, ಗಯಾ, ಕೊಡರ್ಮಾ, ಹಜಾರಿಬಾಗ್ ರೋಡ್, ಪಾರಸ್‌ನಾಥ್ ಮತ್ತು ನೇತಾಜಿ ಸುಭಾಸ್ ಚಂದ್ರ ಬೋಸ್ ಗೋಮೊಹ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಈ ವಿಶೇಷ ರೈಲು 21 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 2 ಎಸಿ 3-ಟೈರ್ ಕೋಚ್‌ಗಳು, 13 ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್‌ಗಳು, 4 ಸೆಕೆಂಡ್ ಕ್ಲಾಸ್ ಕೋಚ್‌ಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‌ (ದಿವ್ಯಾಂಗಜನ ಸ್ನೇಹಿ ಕಂಪಾರ್ಟ್‌ಮೆಂಟ್‌ ನೊಂದಿಗೆ) ಗಳನ್ನು ಹೊಂದಿರುತ್ತದೆ.

3. ರೈಲು ಸಂಖ್ಯೆ 06597/06598 ಯಶವಂತಪುರ- ಯೋಗ ನಗರಿ ಋಷಿಕೇಶ- ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್

(i) ರೈಲು ಸಂಖ್ಯೆ 06597 ಯಶವಂತಪುರ- ಯೋಗ ನಗರಿ ಋಷಿಕೇಶ ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 05.03.2026, 12.03.2026, 19.03.2026, 26.03.2026, 02.04.2026, 09.04.2026, 16.04.2026, 23.04.2026 ಮತ್ತು 30.04.2026 (ಗುರುವಾರ) ರಂದು ಬೆಳಿಗ್ಗೆ 7 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು 3 ನೇ ದಿನ (ಶನಿವಾರ) ಬೆಳಿಗ್ಗೆ 10.20ಕ್ಕೆ ಯೋಗ ನಗರಿ ಋಷಿಕೇಶ ನಿಲ್ದಾಣವನ್ನು ತಲುಪಲಿದೆ.

(ii) ರೈಲು ಸಂಖ್ಯೆ 06598 ಯೋಗ ನಗರಿ ಋಷಿಕೇಶ – ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ದಿನಾಂಕ 07.03.2026, 14.03.2026, 21.03.2026, 28.03.2026, 04.04.2026, 11.04.2026 18.04.2026, 25.04.2026, 02.05.2026 (ಶನಿವಾರ) ರಂದು ಸಂಜೆ 5.55ಕ್ಕೆ ಯೋಗ ನಗರಿ ಋಷಿಕೇಶ ನಿಲ್ದಾಣದಿಂದ ಹೊರಟು 3 ನೇ ದಿನ (ಸೋಮವಾರ) ರಾತ್ರಿ 7.45 ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.

ಮಾರ್ಗದಲ್ಲಿ ಈ ರೈಲುಗಳಿಗೆ ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಧೋಣ್, ಕರ್ನೂಲ್ ಸಿಟಿ, ಕಾಚಿಗುಡ, ಕಾಜಿಪೇಟೆ, ಬಲ್ಹಾರ್ಶಾ, ನಾಗ್ಪುರ, ಭೋಪಾಲ್, ಬೀನಾ, ವೀರಾಂಗನಾ ಲಕ್ಷ್ಮಿಬಾಯಿ ಝಾನ್ಸಿ, ಗ್ವಾಲಿಯರ್, ಆಗ್ರಾ ಕ್ಯಾಂಟ್, ಮಥುರಾ ಜಂಕ್ಷನ್, ಹಜರತ್ ನಿಜಾಮುದ್ದೀನ್, ಘಾಜಿಯಾಬಾದ್ ಜಂಕ್ಷನ್, ಮೀರತ್ ಸಿಟಿ, ಮುಜಾಫರ್‌ನಗರ, ಟಪ್ರಿ, ರೂರ್ಕಿ ಮತ್ತು ಹರಿದ್ವಾರ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಈ ವಿಶೇಷ ರೈಲು 18 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ 1 ಫಸ್ಟ್ ಎಸಿ ಕಮ್ ಎಸಿ 2-ಟೈರ್ ಕೋಚ್, 1 ಎಸಿ 2-ಟೈರ್ ಕೋಚ್, 3 ಎಸಿ 3-ಟೈರ್ ಕೋಚ್‌ಗಳು, 8 ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್‌ಗಳು, 3 ಸೆಕೆಂಡ್ ಕ್ಲಾಸ್ ಕೋಚ್‌ಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‌ (ದಿವ್ಯಾಂಗಜನ ಸ್ನೇಹಿ ಕಂಪಾರ್ಟ್‌ಮೆಂಟ್‌ ನೊಂದಿಗೆ) ಗಳನ್ನು ಹೊಂದಿರುತ್ತದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

 


Share this with Friends

Related Post