Mon. Dec 23rd, 2024

ದೈಹಿಕವಾಗಿ ಸದೃಢವಾಗಿರಲು ಕ್ರೀಡೆ ಸಹಕಾರಿ: ಬಿ.ಎಂ. ಸವಿತಾ

Share this with Friends

ಮೈಸೂರು.ಮಾ.6: ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರಲು ಕ್ರೀಡೆ ಸಹಕಾರಿ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಿ.ಎಂ. ಸವಿತಾ ತಿಳಿಸಿದರು.

ಪ್ರತಿಯೊಬ್ಬ ಮಹಿಳೆಯು ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಿಸಬೇಕೆಂದು ಅವರು ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ಕ್ರೀಡಾ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಮನೆ ಹಾಗೂ ಕಛೇರಿಗಳಲ್ಲಿ ಎರಡು ಕಡೆಯು ಸಮನಾಗಿ ಕೆಲಸಮಾಡುತ್ತಾರೆ. ಒತ್ತಡಗಳು ಇದ್ದೇ ಇರುತ್ತವೆ. ಒತ್ತಡಗಳನ್ನು ಮರೆಯಲು ಕ್ರೀಡೆ ಮುಖ್ಯ, ಗಂಡು ಮಕ್ಕಳಂತೆ ನಾವು ಸಹ ಸಾಧನೆ ಮಾಡಬಹುದು ಆದ್ದರಿಂದ ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ಕೃಷ್ಣಂರಾಜು ಅವರು ಮಾತನಾಡಿ, ಹೆಣ್ಣು ಮಕ್ಕಳು ಸಹ ಆರೋಗ್ಯವಾಗಿರಬೇಕೆಂದು ಈ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ ಎಂದು ‌ತಿಳಿಸಿದರು.

ಸಮಾರಂಭದಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಹಿರಿಯ ಭೂ ವಿಜ್ಞಾನಿ ಡಾ. ಪುಷ್ಪವತಿ, ಎನ್.ಎಸ್.ಎಸ್ ಅಧಿಕಾರಿ ಡಾ. ಲಕ್ಷ್ಮಿ ಪಲೋಡಿ, ಎಂ. ಲಾವಣ್ಯ, ವಿಜಯ ಲಕ್ಷ್ಮಿ, ಆರ್. ಸುಂದರೇಶ್ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post