Sat. Apr 12th, 2025

ಅಸ್ಸಾಂ ಜೈಲಿನಲ್ಲಿ ಅಮೃತ್ ಪಾಲ್ ಸಿಂಗ್ ಸೆಲ್ ನಲ್ಲಿ ಸ್ಪೈ ಕ್ಯಾಮರಾ ಪತ್ತೆ

Share this with Friends

ಅಸ್ಸಾಂ, ಫೆ.18: ಅಸ್ಸಾಂ ಜೈಲಿನಲ್ಲಿ ಪ್ರತ್ಯೇಕತಾವಾದಿ ನಾಯಕನ ಸೆಲ್‌ನಲ್ಲಿ ಸ್ಪೈ ಕ್ಯಾಮರಾ, ಫೋನ್ ಪತ್ತೆಯಾಗಿದ್ದು ಇದು ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ.

ಪ್ರತ್ಯೇಕತಾವಾದಿ ನಾಯಕ ಮತ್ತು ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್ ಗೆ ಹೆಚ್ಚು ಸುರಕ್ಷಿತ ದಿಬ್ರುಗರ್ ಜೈಲಿನಲ್ಲಿ ಇರಿಸಲಾಗಿದೆ.

ಅದೂ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಸೆಲ್‌ನಲ್ಲಿ ಇದ್ದರೂ ಕೂಡಾ ಹಲವಾರು ಸ್ಪೈ ಫೋನ್ ಪತ್ತೆಯಾಗಿರುವುದು ಆತಂಕಕಾರಿ ವಿಷಯ.

ಶೋಧ ಕಾರ್ಯಾಚರಣೆಯಲ್ಲಿ ಸ್ಪೈ ಕ್ಯಾಮೆರಾ, ಮೊಬೈಲ್, ಕೀಪ್ಯಾಡ್ ಫೋನ್, ಪೆನ್ ಡ್ರೈವ್ ಗಳು, ಬ್ಲೂಟೂತ್ ಹೆಡ್ ಫೋನ್‌ಗಳು ಮತ್ತು ಸ್ಪೀಕರ್ ಗಳು, ಸ್ಮಾರ್ಟ್ ವಾಚ್ ಸೇರಿದಂತೆ ಹಲವಾರು ಅನಧಿಕೃತ ವಸ್ತುಗಳನ್ನು ಎನ್ಎಸ್ಎ ಸೆಲ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಹೇಳಿದ್ದಾರೆ.

ವಶಪಡಿಸಿಕೊಂಡ ಎಲ್ಲಾ ವಸ್ತುಗಳನ್ನು ಜೈಲು ಸಿಬ್ಬಂದಿ ಕಾನೂನುಬದ್ಧವಾಗಿ ವಶಪಡಿಸಿಕೊಂಡಿದ್ದಾರೆ ಮತ್ತು ಈ ವಸ್ತುಗಳ ಮೂಲದ ಕುರಿತು ತನಿಖೆ ನಡೆಯತ್ತಿದೆ ಎಂದು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಜೈಲು ಸಿಬ್ಬಂದಿ ಇಂದು ಮುಂಜಾನೆ ಎನ್ಎಸ್ಎ ಸೆಲ್‌ನ ಆವರಣದಲ್ಲಿ ಶೋಧ ನಡೆಸಿದಾಗ ಈ ಆತಂಕಕಾರಿ ವಿಷಯ ಬೆಳಕಿಗೆ ಬಂದಿದ್ದು ಎಲ್ಲಾ ವಸ್ತುಗಳನ್ನು ಸೀಜ್ ಮಾಡಲಾಗಿದೆ.


Share this with Friends

Related Post