Sat. Dec 28th, 2024

ಭಾನುಪ್ರಕಾಶ್ ನಿಧನಕ್ಕೆ ಶ್ರೀವತ್ಸ ಸಂತಾಪ

Share this with Friends

ಮೈಸೂರು, ಜೂ.17: ಬಿಜೆಪಿಯ ಹಿರಿಯ ನಾಯಕ ಶಿವಮೊಗ್ಗದ ಭಾನುಜಿ ಎಂದೆ ಹೆಸರಾಗಿದ್ದ ಭಾನುಪ್ರಕಾಶ್ ರವರು ಅಗಲಿರುವುದು ನೋವುಂಟು ಮಾಡಿದೆ ಎಂದು ಶಾಸಕ ಶ್ರೀ ವತ್ಸ ಸಂತಾಪ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಸಂಕೇತಿ ಸಾಹಿತಿಗಳ ಸಮ್ಮೇಳನವನ್ನು ಏರ್ಪಡಿಸಿ ನನ್ನನ್ನು ಸಮ್ಮೇಳನಕ್ಕೆ ಗೌರವಾಧ್ಯಕ್ಷರ ರನ್ನಾಗಿ ನೇಮಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದು ಮರೆಯಲಾಗದ ಕ್ಷಣ ಎಂದು ಶಾಸಕರು‌ ಬಣ್ಣಿಸಿದ್ದಾರೆ.

ನಾನು ವಿಧಾನಸಭಾ ಸದಸ್ಯನಾಗಲು ಪ್ರಮುಖರುಗಳಲ್ಲಿ ಭಾನುಪ್ರಕಾಶ್ ಕೂಡ ಒಬ್ಬರು.ನನ್ನ ರಾಜಕೀಯ ಪ್ರತಿ ಹೆಜ್ಜೆಯಲ್ಲೂ ಇವರ ಪಾತ್ರ ಮಹತ್ವ, ಇಂತಹ ವ್ಯಕ್ತಿಯು ಅಗಲಿರುವುದು ತುಂಬಾ ನಷ್ಟ ವನ್ನುಂಟಾಗಿದೆ.

ಭಾನುಜಿ ಅವರನ್ನು ಕಳೆದುಕೊಂಡ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ಕರುಣಿಸಲೆಂದು ಕೊರುತ್ತೇನೆ ಎಂದು
ಟಿ.ಎಸ್.ಶ್ರೀ ವತ್ಸ ತಿಳಿಸಿದ್ದಾರೆ.


Share this with Friends

Related Post