ಮೈಸೂರು ,ಆ.5:ಮಹಿಳೆಯರಲ್ಲಿ ಸೌಂದರ್ಯಪ್ರಜ್ಞೆ ಹೆಚ್ಚುತ್ತಿದ್ದು,
ಬ್ಯೂಟಿಷಿಯನ್ ಮತ್ತು ಹೊಲಿಗೆ ವೃತ್ತಿಗೆ ಉತ್ತಮ ಅವಕಾಶಗಳಿವೆ ಎಂದು ಅಖಿಲ ಭಾರತೀಯ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ನಿರ್ದೇಶಕಿ ನಾಗಜ್ಯೋತಿ ಹೇಳಿದರು.
ನಗರದ ಕಾರುಣಿ ಟ್ರಸ್ಟ್ ವತಿಯಿಂದ ವಿಶ್ವ ಸೌಂದರ್ಯ ದಿನದ ಅಂಗವಾಗಿ ಬ್ಯೂಟಿಷಿಯನ್ ತರಬೇತಿದಾರರಾದ ಪ್ರಮೀಳಾ ಭರತ್, ರಾಧಿಕಾ, ಉಮಾ ಜಾದವ್, ಶಾಂತಗೌಡ, ಶಶಿಕಲಾ, ಪೃಥ ಬಿಕ್ಕೆಮನೆ ಅವರುಗಳ ಸನ್ಮಾನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಎಲ್ಲರಿಗೂ ಸರ್ಕಾರಿ ಉದ್ಯೋಗ ದೊರೆಯಲು ಸಾಧ್ಯವಿಲ್ಲ, ಹೀಗಾಗಿ ಸ್ವ- ಉದ್ಯೋಗ ಪ್ರಾರಂಭಿಸಿ ಸಮಾಜದ ಇನ್ನಷ್ಟು ಮಂದಿಗೆ ಉದ್ಯೋಗ ನೀಡುವ ಮೂಲಕ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಹೆಣ್ಣು ಮಕ್ಕಳಿಗೆ ತಾನು ಸುಂದರವಾಗಿರಬೇಕೆಂಬ ಹಂಬಲವಿದೆ, ದೇವರು ಕೊಟ್ಟ ರೂಪಕ್ಕೆ ಮೆರುಗು ಕೊಡುವ ಕೆಲಸ ಬ್ಯೂಟಿ ಪಾರ್ಲರ್ ಗಳ ಮೂಲಕ ನಡೆಯುತ್ತಿದೆ,ತಾವು ಕಲಿತ ವಿದ್ಯೆಯನ್ನು ಆಧರಿಸಿ ಸ್ವ ಉದ್ಯೋಗ ಆರಂಭಿಸಿರುವ ಮಹಿಳೆಯರ ಸಾಧನೆ ಶ್ಲಾಘನೀಯ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್,
ಮಹಿಳೆಯರು ಬ್ಯೂಟಿಷಿಯನ್ ಕೇಂದ್ರಗಳನ್ನು ತೆರೆದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಸಮೃದ್ಧಿ ವಾರ್ತಾ ಪತ್ರಿಕೆ ಸಂಪಾದಕಿ ಸಹನ,
ಅಥರ್ವ ಫೌಂಡೇಶನ್ ಅಧ್ಯಕ್ಷೆ ಪುಷ್ಪ ಲತಾ, ಕಾರುಣಿ ಟ್ರಸ್ಟ್ ಅಧ್ಯಕ್ಷರಾದ ರುಕ್ಮಿಣಿ, ಸವಿತಾ, ಅನುಷಾ, ಚಾರುಲತಾ, ಪ್ರಿಯಾಂಕ ಮತ್ತಿತರರು ಹಾಜರಿದ್ದರು.