ಮೈಸೂರು, ಏ.23: ಭಾರತ ದೇಶವನ್ನು ಇನ್ನೂ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಮೋದಿಯವರ ಕೈ ಬಲ ಪಡಿಸಬೇಕೆಂದು ಎನ್ ಡಿಎ ಅಭ್ಯರ್ಥಿ ಯದುವೀರ್ ತಿಳಿಸಿದರು
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಗಾಯತ್ರಿಪುರಂ ನಲ್ಲಿರುವ
ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ರೋಡ್ ಶೋಗೆ ಚಾಲನೆ ನೀಡಿದ ವೇಳೆ ಅವರು ಮಾತನಾಡಿದರು.
ನರಸಿಂಹರಾಜ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಯಿತು,
ರೋಡ್ ಶೋ ವೇಳೆ, ಯದುವೀರ್ ಅವರ ಪೋಟೋ ವನ್ನು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕ್ಲಿಕಿಸಿ ಕೊಳ್ಳುತ್ತಿದ್ದುದು ವಿಶೇಷವಾಗಿತ್ತು.
ನರೇಂದ್ರ ಮೋದಿಯವರು ಹತ್ತು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಆರ್ಥಿಕವಾಗಿ ಕುಸಿತಗೊಂಡಿದ್ದ ದೇಶವನ್ನು ಪ್ರಗತಿಕಾಣುವಂತೆ ಮಾಡಿದ್ದಾರೆ,
ಭಾರತ ದೇಶವನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯ ಬೇಕಾದರೆ ಮೋದಿಯವರ ಕೈ ಬಲ ಪಡಿಸಬೇಕಿದೆ, ಮತದಾನ ನಮ್ಮೆಲ್ಲರ ಹಕ್ಕು ಅದನ್ನು ಸದುಪಯೋಗ ಪಡಿಸಿಕೊಂಡು ಈ ಬಾರಿ ಸಮಚಿತ್ತದಿಂದ ಬಿಜೆಪಿಗೆ ಮತ ಚಲಾಯಿಸುವ ಮೂಲಕ ಭಾರತ ದೇಶವನ್ನು ಇತರೆ ದೇಶಗಳಿಗಿಂತ ಮುಂದುವರಿದ ರಾಷ್ಟ್ರವಾಗಿ ಕಟ್ಟೋಣ ಎಂದು ಕರೆ ನೀಡಿದರು.
ಮಾಜಿ ಶಾಸಕ ಎಸ್ ಎ ರಾಮದಾಸ್, ಮಾಜಿ ಮೇಯರ್ ಸಂದೆಶ್ ಸ್ವಾಮೀ , ಗಿರಿಧರ್ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಸಾತ್ ನೀಡಿದರು.