Sat. Nov 2nd, 2024

ಸೈಬರ್ ಅಪರಾಧಗಳ‌ ಬಗ್ಗೆ ಜಾಗೃತಿ ಮೂಡಿಸಿದ‌‌ ಸಬ್ ಇನ್ಸ್ ಪೆಕರ್ ಮಹೇಶ್

Share this with Friends

ಮೈಸೂರು,ಜೂ.23: ಮೈಸೂರಿನ ವಿಜಯನಗರದ ನಾಲ್ಕನೇ ಹಂತದಲ್ಲಿರುವ ಎಸ್‌ವಿಇಐ ಶಾಲೆಯಲ್ಲಿ 2024-25 ನೇ ಸಾಲಿನ ಹೂಡಿಕೆ ಸಮಾರಂಭವನ್ನು ವಿಶೇಷವಾಗಿ ಆಚರಿಸಲಾಯಿತು.

ಸಬ್ ಇನ್ಸ್ಪೆಕ್ಟರ್ ಮಹೇಶ್ ವಿ ಅವರು ಸಮಾರಂಭವನ್ನು ಉದ್ಘಾಟಿಸಿ
ವಿದ್ಯಾರ್ಥಿಗಳ ಶಿಸ್ತನ್ನು ಗಮನಿಸಿ ದೈಹಿಕ ಶಿಕ್ಷಕ ನಾಗೇಶ್ ಅವರನ್ನು ಶ್ಲಾಘಿಸಿದರು.

ಶಾಲೆಗಳಲ್ಲಿ ಇಂತಹ ಸಮಾರಂಭಗಳನ್ನು ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಅಧಿಕಾರ, ಜವಾಬ್ದಾರಿ, ಶಿಸ್ತು ಸಮಾಜಿಕ ಪ್ರಜ್ಞೆ ಹೊಣೆಗಾರಿಕೆ‌ ಬೆಳೆಯುತ್ತದೆ ಹಾಗೂ ಪ್ರಜಾಪ್ರಭುತ್ವಕ್ಕೆ ಉತ್ತಮ ಅರ್ಹತೆಯುಳ್ಳ ನಾಳಿನ ನಾಯಕರನ್ನು ರೂಪಿಸುವಲ್ಲಿ ನೆರವಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಮಿಲಿಟರಿ ಜೀವನದ ಬಗ್ಗೆ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಮೊಬೈಲ್ ಬಳಸುವುದರಿಂದ ಏನೆಲ್ಲ ಅನಾಹುತಗಳಾಗುತ್ತಿವೆ, ಸೈಬರ್ ಅಪರಾಧಗಳು ಯಾವ ರೀತಿ ನಡೆಯುತ್ತಿದೆ, ಅವುಗಳಿಂದ ಯಾವ ರೀತಿ ಜಾಗೃತರಾಗಿರಬೇಕು, ಸಂಚಾರ ನಿಯಮ ಪಾಲಿಸದೆ ಇದ್ದರೆ ಪೋಷಕರಿಗೆ ಏನೆಲ್ಲಾ ತೊಂದರೆ ಆಗುತ್ತದೆ ಎಂಬುದನ್ನು ಸಬ್ ಇನ್ಸ್ ಪೆಕ್ಟರ್ ಮಹೇಶ್ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಸಂತ್ ಕುಮಾರ್.ಎ ಮತ್ತು ಭಾರತಿ ಕೆ.ಎಂ., ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮಾಲಿನಿ ಬಿ.ಜಿ ಮತ್ತು ಸುನಿತಾ ಎನ್., ದೈಹಿಕ ಶಿಕ್ಷಕ ಸತೀಶ್ ಮತ್ತಿತರರು‌ ಹಾಜರಿದ್ದರು.


Share this with Friends

Related Post