ಮೈಸೂರು,ಫೆ.7: ಮೈಸೂರಿನ
ಕೇಂದ್ರ ಕಾರಾಗೃಹಕ್ಕೆ ನಗರ ಪೊಲೀಸ್ ಘಟಕದ ಹಿರಿಯ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಶಾಕ್ ನೀಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ.ಬಿ ರಮೇಶ್ ಅವರ ಆದೇಶದ ಮೇರೆಗೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಹಾಗೂ ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಅವರು ಎಸಿಪಿ ಹಾಗೂ ಇನ್ಸ್ಪೆಕ್ಟರ್ ಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಂಧಿತರ ಬ್ಯಾರಕ್ ಗಳು ಮತ್ತು ಕಾರಾಗೃಹದ ಒಳಭಾಗ ತಪಾಸಣೆ ನಡೆಸಿದರು.
ತಪಾಸಣೆ ವೇಳೆ ಚಾಕು, ಹಣ, ಮೊಬೈಲ್ ಚಾರ್ಜರ್ ಗಳು ಪತ್ತೆಯಾಗಿದೆ.
ತಕ್ಷಣ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕಾರಾಗೃಹ ಅಧಿಕಾರಿಗಳಿಗೆ ಡಿಸಿಪಿಗಳು ಸೂಚನೆ ನೀಡಿದರು.
ದಾಳಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜು ಎಂ, ಕೇಂದ್ರ ಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್. ಜಾಹ್ನವಿ ಅವರ ಉಸ್ತುವಾರಿಯಲ್ಲಿ ಎಸಿಪಿ, ವಿವಿಧ ಠಾಣೆಗಳ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಇತರೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ಕಮಾಂಡೋ ಪಡೆ ಮತ್ತು ಶ್ವಾನ ದಳ ಪಾಲ್ಗೊಂಡಿದ್ದರು.